ಅಮೇರಿಕಾದ ನೆರಳಿನಡಿ ಸ್ವಾತಂತ್ರ್ಯೋತ್ಸವ ಆಚರಿಸೋಣ!

20 ಆಗಸ್ಟ್ 10

 

ಎಲ್ಲಾ ವಿಷಯಗಳಲ್ಲೂ ಭಾರತ ದೇಶ
ಆಗಿರುವಾಗ ಅಮೇರಿಕಾ ದೇಶದ ಬಂಧಿ

ಅಮೇರಿಕಾದ ಹೆಣ್ಣೊಬ್ಬಳನ್ನು ಕರೆದು ಇಲ್ಲಿ
ಕೊಟ್ಟುಬಿಡುವ ಆಕೆಗೂ ಹೆಸರು ಗಾಂಧಿ

ವಿದೇಶೀ ಹೆಣ್ಣು ಮಕ್ಕಳು ನಮಗೆ ಇಷ್ಟ
ಬೆಳ್ಳಗಿದ್ದರಂತೂ ಎರಡು ಮಾತೇ ಇಲ್ಲ

ಸರಕಾರಕ್ಕೆ ಸಲಹೆ ನೀಡಲು ಆಕೆಯೂ
ಇರಲಿ, ಈಗ ಇಟಲಿಯ ಪ್ರಜೆಯಿದ್ದಾಳಲ್ಲಾ?

ಪದೇ ಪದೇ ಇಲ್ಲಿಂದ ಅಮೇರಿಕ್ಕಾಕ್ಕೆ
ಕರೆಮಾಡಿ ಸಲಹೆ ಕೇಳುವ ಅಗತ್ಯ ಇಲ್ಲ

ಇಲ್ಲೇ ಕೂತು, ಆಕೆಯೇ ನಡೆಸಲಿ ಬಿಡಿ
ಆಡಳಿತ, ನಮಗೇನೂ ಅಭ್ಯಂತರ ಇಲ್ಲ

ಪಾಕಿನ ಬಗ್ಗೆ ನೀತಿ ಏನಾಗಿರಬೇಕೆಂದು
ಅಮೇರಿಕಾನೇ ಹೇಳಬೇಕು ನಮಗೆ

ಭೋಪಾಲ ದುರಂತದ ದಾವೆಯ ಬಗ್ಗೆ
ಅಮೇರಿಕಾ ನೀಡುವುದು ಸಲಹೆ ನಮಗೆ

ಭಯೋತ್ಪಾದನೆ ತಡೆಗಟ್ಟಲು ನಾವು ಕ್ರಮ
ಕೈಗೊಳ್ಳುವುದು ಅಮೇರಿಕಾವನೇ ಕೇಳಿ

ಎಲ್ಲಾ ಅವರ ಇಚ್ಛೆಯಲೇ ನಡೆಯುತ್ತಿರಲು
ನಮ್ಮದೇನು ಉಳಿದಿದೆ ಇನ್ನು ಇಲ್ಲಿ ಹೇಳಿ

ಹಾಗಾಗಿ ಇನ್ನೊಂದು ಬಿಳೀ ತೊಗಲಿನ
ಗಾಂಧಿಯನು ಆಮದು ಮಾಡಿಕೊಳ್ಳೋಣ

ಅಮೇರಿಕಾದ ನೆರಳಿನಡಿ ನಾವು ನಮ್ಮ
ಸ್ವಾತಂತ್ರ್ಯೋತ್ಸವಾಚರಣೆ ಮಾಡೋಣ!!!
***********************


ಸ್ವಂತಿಕೆ ಇಲ್ಲದವನು ನೆಮ್ಮದಿಯನೇ ಪಡೆಯಲಾರ!!!

09 ಫೆಬ್ರ 10

 

 

ಕತ್ತಿ ಹಿಡಿದವರ ಮಾತಿಗೆ ಬನ್ನಿ ಎಂದು ಕರೆದರೆ ಇನ್ನೇನಾಗಬಹುದು 

ಕತ್ತಿಯ ಭಯದಿಂದಲೇ ತಮ್ಮನ್ನು ಕರೆಯುತಿಹರು ಎಂದೆನ್ನಬಹುದು 

 

ಅಲ್ಲಿ ಕತ್ತಿಯ ಮಸೆಯಲು ಅವರಿಗೆ ಸಹಕಾರ ನೀಡುತ್ತಾ ಬಂದವರು 

ಇಲ್ಲಿ ನಮ್ಮೊಂದಿಗೆ ಬಲು ಸ್ನೇಹದ ಮಾತನ್ನು ಆಡುತ್ತಾ ಇರುವವರು 

 

ಅಮೇರಿಕಾ ಹೇಳಿದಂತೆ ಆಡುತ್ತಾ ಬಂದಿಹುದು ಪಾಕಿಸ್ತಾನ ಈ ತನಕ 

ಈಗ ಅವರಾಡಿಸಿದಂತೆಯೇ ಆಡುತಿದೆ ನಮ್ಮ ಸರ್ಕಾರ ಥಕ ಥಕ ಥಕ 

 

ಅಮೇರಿಕಾ ಹೇಳಿದಂತೆ ಕುಣಿದು ಈಗ ಕೊರಗುತ್ತಿದ್ದಾನೆ ಟೋನಿ ಬ್ಲೇರ 

ಸ್ವಂತಿಕೆ ಇಲ್ಲದವನು ಏನು ಮಾಡಿದರೂ ನೆಮ್ಮದಿಯನೇ ಪಡೆಯಲಾರ 

 

ನಮ್ಮವರಿಗೆ ಅದ್ಯಾವ ದಿನ ಸದ್ಬುದ್ಧಿ  ಬರುವುದೋ ಆ ಭಗವಂತನೇ ಬಲ್ಲ 

ಆದರದರೊಳಗೆ  ಇಟಲಿಯ ಮುದುಕಿ ದೋಚಬಹುದು ಬೇಕಾದುದನ್ನೆಲ್ಲಾ !!!

***************************************** 


ಮುಷರಫನಿಗೆ ಈಗ ಪುಕ್ಕಟೆ ಆದಾಯ!!!

17 ಸೆಪ್ಟೆಂ 09

ಮಾಜೀ ಪಾಕ್ ಅಧ್ಯಕ್ಷ ಮೊನ್ನೆ ಹೇಳಿದ್ದು ಗುಟ್ಟೇನೂ ಅಲ್ಲ

ಅಮೇರಿಕಾದ ಉದ್ದೇಶ ಯಾರಿಗೂ ತಿಳಿಯದ್ದೇನೂ ಅಲ್ಲ

 

ಪಾಕನ್ನು ವರುಷಗಳಿಂದ ಹುರಿದುಂಬಿಸಿದವರು ಅವರೇ

ಭಾರತದ ವಿರುದ್ಧ ಧೈರ್ಯ ತುಂಬುತ್ತಿದ್ದವರೂ ಅವರೇ

 

ಅಮೇರಿಕಾ ನೀಡಿದ ಸಹಾಯಗಳನ್ನು ಉಗ್ರರ ವಿರುದ್ಧ

ಬಳಸದೇ ಸೈನ್ಯವನು ಭಾರತಕ್ಕಿದಿರು ಇರಿಸಿತ್ತು ಸನ್ನದ್ಧ

 

ಆದರೀಗ ಅಮೇರಿಕಾದ ಮಾನ ಆಗಿಯಾಗಿದೆ ಹರಾಜು

ಅದಕ್ಕೇ ಹೇಳಿದ್ದ ಮಾತನ್ನೇ ವಾಪಸು ಪಡೆದ ಪರ್ವೇಜು

 

ನೀವು ಮಾಡುತಿರುವುದು ಏನೆಂದು ನಮಗೂ ಗೊತ್ತಿತ್ತು

ಆದರೆ ನೀವು ಹೀಗೆಲ್ಲಾ ಬಾಯ್ಬಿಟ್ಟು ಹೇಳಲೇ ಬಾರದಿತ್ತು

 

ಹೀಗೆ ಮುಷರಫನ ಮೇಲೆ ಒತ್ತಡ ಹೇರಿರಬಹುದೇನೋ

ಮಾತ ಹಿಂಪಡೆದುದಕೆ ಕೈತುಂಬಾ ನೀಡಿರಬಹುದೇನೋ

 

ಪರ್ವೇಜನಿಗೆ ಇದರಿಂದ ಆಗಿರಬಹುದು ದೊಡ್ಡ ಆದಾಯ

ಕೆಲಸ ಏನಿರದಿದ್ದರೂ ಮಾತಿನಿಂದಲೇ ಪುಕ್ಕಟೆ ಆದಾಯ