ತನಗೆ ಮತ್ತಾ ಸ್ಥಾನಕ್ಕೇ ಅಗೌರವ ತಂದಿಹರಿವರು!

14 ಆಕ್ಟೋ 10

 

ಗೌರವದ ಸ್ಥಾನದಲ್ಲಿದ್ದುಕೊಂಡು
ತನ್ನ ಗೌರವವನ್ನು ಉಳಿಸಿಕೊಂಡು
ನಿಷ್ಪಕ್ಷಪಾತಿಯಾಗಿ ಇದ್ದಿರಬೇಕಾದವರು

ದಿನ ಪ್ರತಿದಿನ ಹೇಳಿಕೆಗಳ ನೀಡಿ
ಸರಕಾರವನ್ನು ಎಡೆಬಿಡದೇ ಕಾಡಿ
ಮೆರೆಯಲು ಹೋಗಿ ಈಗ ಎಡವಿಬಿದ್ದಿಹರು

ವಿರೊಧಪಕ್ಷದವರ ಮಾತೇ ಬೇಕಿಲ್ಲ
ಮಾತೃ ಪಕ್ಷದವರೇ ಬೆಲೆಕೊಡುತ್ತಿಲ್ಲ
ಎಲ್ಲಾ ಕಡೆಯಿಂದಲೂ ಉಗಿಸಿಕೊಳ್ಳುತಿಹರು

ಸಭಾಪತಿಗೆ ಬರೆದ ಪತ್ರ ಕಸದಬುಟ್ಟಿಗೆ
ಬೆಲೆಯಿಲ್ಲ ದಿಲ್ಲಿಯಲ್ಲೀತನ ಶಿಫಾರಸ್ಸಿಗೆ
ಉಳಿವಿಗಾಗಿ ಓಲೈಕೆಯ ನಾಟಕವಾಡುತಿಹರು

ಗೌರವದ ಸ್ಥಾನ ಪಡೆಯುವವರು ಹಲವರು
ಆ ಸ್ಥಾನಕ್ಕೇ ಗೌರವ ತರುವವರು ಕೆಲವರು
ತನಗೆ ಮತ್ತಾ ಸ್ಥಾನಕ್ಕೇ ಅಗೌರವ ತಂದಿಹರಿವರು

ಪಕ್ಷಾತೀತ ಸ್ಥಾನಕ್ಕೇರಿದ ಮೇಲೆ ಮಂದಿ
ಪಕ್ಷದ ತಂತ್ರಗಳಿಗೆ ಆಗಿರಬಾರದು ಬಂಧಿ
ತನ್ನನ್ನು ತಾನೇ ಕೆಡಿಸಿಕೊಂಡೀಗ ಮರುಗುತಿಹರು
****