ನಾವದೇಕೆ ಅಸಹಾಯಕರಾದೆವು?

|ಜೀವನದ ಈ ಪಯಣದಲಿ ನಾವದೇಕೆ ಅಸಹಾಯಕರಾದೆವು,
ಅದೆಷ್ಟು ಸನಿಹರಾದೆವೆಂದರೆ ಪರಸ್ಪರರಿಂದ ದೂರವಾದೆವು|

ನನಗಿಲ್ಲಾವ ಸಂತಸವೂ ದಕ್ಕಿಲ್ಲ ಎಂದೇನಲ್ಲ
ಆದರೆ ಈ ಜೀವನವೆಂದೂ ಜೀವನವೇ ಆಗಿಲ್ಲ
ಯಾಕಿದರ ನಿರ್ಣಯಗಳನ್ನೆಲ್ಲಾ ನಾವು ಸ್ವೀಕರಿಸಿದೆವು?

|ಜೀವನದ ಈ ಪಯಣದಲಿ ನಾವದೇಕೆ ಅಸಹಾಯಕರಾದೆವು,
ಅದೆಷ್ಟು ಸನಿಹರಾದೆವೆಂದರೆ ಪರಸ್ಪರರಿಂದ ದೂರವಾದೆವು|

ನಿನ್ನನ್ನು ಪಡೆದಂದೇ ಕಳೆದುಕೊಂಡ ಅನುಭವವೂ ನನಗಾಯ್ತು
ನೊಂದ ಹೃದಯಕ್ಕಾಗಿ ನಾ ಮರುಗಿದರೆ ಹೃದಯ ನನಗಾಗಿ ಮರುಗಿತ್ತು
ಕಣ್ಣಂಚಿನಿಂದ ಕನಸುಗಳು ಜಾರಿ ಅವೇಕೆ ನುಚ್ಚುನೂರಾದವು

|ಜೀವನದ ಈ ಪಯಣದಲಿ ನಾವದೇಕೆ ಅಸಹಾಯಕರಾದೆವು,
ಅದೆಷ್ಟು ಸನಿಹರಾದೆವೆಂದರೆ ಪರಸ್ಪರರಿಂದ ದೂರವಾದೆವು|

#ಆಸುಮನ
#ಭಾವಾನುವಾದ

क्यों जिन्दगी की राह में मजबूर हो गए
इतने हुए करीब के हम दूर हो गए

ऐसा नहीं के हम को कोई भी खुशी नहीं
लेकिन ये जिन्दगी तो कोई जिन्दगी नहीं
क्यों इसके फैसले हमे मंजूर हो गए

पाया तुम्हे तो हम को लगा तुम को खो दिया हम दिल पे रोये और ये दिल हम पे रो दिया पलकों से ख्वाब क्यों गिरे क्यों चूर हो गए

One Response to ನಾವದೇಕೆ ಅಸಹಾಯಕರಾದೆವು?

  1. Nanaiah Dc ಹೇಳುತ್ತಾರೆ:

    ಈ ಹಳೆಯ ಹಾಡು ಭ್ರಮಾ ಪ್ರಪಂಚದ ಗುಟ್ಟನ್ನು ತೆರೆದಿಟ್ಟಂತಿದೆ. ಬಾವನುವಾದ ತುಂಬಾ ಚೆನ್ನಾಗಿದೆ.

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: