ತೃಪ್ತಿ!

ಸಖೀ,
ಹುಸಿಯನಾಡುವ ಮಂದಿಗೆ
ಕರೆದು ಗೈವರೆಲ್ಲಾ ಸನ್ಮಾನ,

ಸದಾ ದಿಟವ ನುಡಿವವರಿಗೆ
ಹೆಜ್ಜೆಹೆಜ್ಜೆಗೂ ಅವಮಾನ,

ಪುರಸ್ಕಾರಕ್ಕಾಗಿ ಹಾಡುವ
ಮಂದಿಯದೊಂದು ವರ್ಗ,

ಆತ್ಮತೃಪ್ತಿಗಾಗಿ ಗೇಯದಲ್ಲಿ
ಮಗ್ನ ಇಹುದೊಂದು ವರ್ಗ,

ಅರ್ಥೈಸಿಕೊಳ್ಳದೇ ಮೆಚ್ಚುತ್ತಾ
ಕೊಂಡಾಡಿದರೆ ಅವರಿಗೆ ತೃಪ್ತಿ,

ತಾ ಬಿತ್ತಿದ ಭಾವಬೀಜವೆಲ್ಲೋ
ಮೊಳಕೆಯೊಡೆದರಿವಗೆ ತೃಪ್ತಿ!
*******

One Response to ತೃಪ್ತಿ!

  1. Badarinath Palavalli ಹೇಳುತ್ತಾರೆ:

    Marketing ಮಾಡಬಲ್ಲವಗೇ ಪುರಸ್ಕಾರ, ಶಾಲು, ನಿಂಬೇ ಹಣ್ಣು, ಹಣ್ಣಿನ ಬುಟ್ಟಿಯ ಜೊತೆಗೆ ಊರಗಲದ ಪ್ರಶಸ್ತಿ ಪತ್ರ, ಇದೇ ಅಸಲೀ ದುರಂತ!

    ಅತ್ಯುತ್ತಮ:
    ತಾ ಬಿತ್ತಿದ ಭಾವಬೀಜವೆಲ್ಲೋ
    ಮೊಳಕೆಯೊಡೆದರಿವಗೆ ತೃಪ್ತಿ!

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: