ಇದೂ ಸತ್ಯವಾಗಿರಬೇಕು!

ಸಖೀ,
ಅವರಿಲ್ಲದ ಬದುಕು ದುಸ್ತರವೆಂದು ಎಣಿಸಿದ್ದೆ
ಅವರಿಲ್ಲದ ಬದುಕಿನಲ್ಲಿ ಗತಿ ಇರದೆಂದೆಣಿಸಿದ್ದೆ
ಹಾಗಾಗಿಲ್ಲ ದಿನದಿಂದ ದಿನಕ್ಕೆ ಏಳಿಗೆಯಾಯ್ತು
ಮಗಳಲ್ಲಿ ಅಪ್ಪಯ್ಯನ ಇರವು ಕಂಡಂತಾಯ್ತು

ಹನ್ನೆರಡು ವರುಷಗಳು ಹೇಗೇಗೋ ಕಳೆದವು
ಎಲ್ಲ ಕ್ಷಣಗಳೂ ಅವರ ನೆನಪಿನಲ್ಲೇ ಕಳೆದವು
ಹೊರಗಿದ್ದವರೀಗೊಳಗೆ ಮನೆ ಮಾಡಿದಂತಿದೆ
ನನ್ನೊಳಗಿನಿಂದಲೇ ಶಕ್ತಿ ತುಂಬುತಿರುವಂತಿದೆ

ಪರಮಾತ್ಮ ನಮ್ಮನ್ನು ಆಲಿಸುವನೆಂಬ ನಂಬಿಕೆ
ನನಗೆ ಆತ್ಮ ಆತ್ಮವನಾಲಿಸುವುದೆಂಬ ನಂಬಿಕೆ
ಅದು ಸತ್ಯವಾಗಿದ್ದರೆ ಇದೂ ಸತ್ಯವಾಗಿರಬೇಕು
ಅಪ್ಪಯ್ಯನವರಾತ್ಮ ಇಂದೂ ಆಲಿಸುತಿರಬೇಕು

ಮರೆಯಾಲಾಗುವುದಿಲ್ಲ ಮರೆತಂತೆ ನಟನೆಯಷ್ಟೇ
ಏಕಾಂತದಲ್ಲಿ ನೆನಪಿಸಿಕೊಂಡು ಕೊರಗುವೆನಷ್ಟೇ
ಅಗಲಿದ ಅವರು ಎಂದೂ ನನ್ನಿಂದ ದೂರವಾಗಿಲ್ಲ
ನನ್ನೊಳಗಿನ ಬೆಳಕಾಗಿ ದಾರಿ ತೋರುತಿಹರಲ್ಲಾ?
******

Advertisements

One Response to ಇದೂ ಸತ್ಯವಾಗಿರಬೇಕು!

  1. Badarinath Palavalli ಹೇಳುತ್ತಾರೆ:

    ತಂದೆಗೆ ತಾವು ಕೊಟ್ಟ ಅಕ್ಷರ ಕಾಣಿಕೆ ಇದು.
    ‘ಹೊರಗಿದ್ದವರೀಗೊಳಗೆ ಮನೆ ಮಾಡಿದಂತಿದೆ’

    ಔನತ್ಯಕ್ಕೇರಿದ ತಮ್ಮ ಪುತ್ರಿಯ ಬಾಳುಮೆ ಹಸನಾಗಿರಲಿ.
    ವೈದ್ಯೋ ನಾರಾಯಣೋ ಹರಿಃ

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: