ಬೇಳೆ ಬೇಯಬೇಕಂತೆ!

ಸಖೀ,
ಕಾಣದ ದೇವರ ಮೇಲೆ ಇರುವ ನಂಬಿಕೆ ಕಣ್ಣಿದಿರು ಇರುವವರ ಮೇಲೆ ನನಗಿಲ್ಲ
ನಾನು ಅರಿತುದೇ ಸತ್ಯ ನಾನು ನುಡಿದುದೇ ಸತ್ಯ ನನಗಿಂತ ಅರಿತವರು ಇಲ್ಲಿಲ್ಲ;

ನಾನು ನಗ್ನನಾಗುತ್ತಾ ಸಾಗಿದರೂ ಪರವಾಗಿಲ್ಲ ಇತರರ ಬಟ್ಟೆಗಳನೆಳೆಯಬೇಕು
ನನ್ನ ಮರ್ಯಾದೆ ಹೋದರೇನಂತೆ ಇತರರ ಮಾನ ಮೂರಾಬಟ್ಟೆ ಮಾಡಬೇಕು;

ರಾಜಕೀಯ ದೊಂಬರಾಟದ ಸ್ನಾನಗೃಹದಲ್ಲಿ ಇರುವವರೆಲ್ಲರೂ ನಗ್ನರೇ ನೋಡು
ಕೊಚಹೊತ್ತು ಅತ್ತಸರಿದು ಇತ್ತಲಿನವರನ್ನು ನೋಡಿ ನಗುವವರು ಇಲ್ಲೆಲ್ಲಾ ನೋಡು;

ಜೈಕಾರ ಹಾಕುವವರಿಗೆ ಯಾರಾದರೇನಂತೆ ಅವರಿಗೂ ಜೈ ಇವರಿಗೂ ಜೈ ಅಂತೆ
ಹಿಂಬಾಲಕರತ್ತ ಗಮನ ನಾಯಕರಿಗೂ ಇಲ್ಲ ಅವರಿಗವರ ಬೇಳೆ ಬೇಯಬೇಕಂತೆ!

2 Responses to ಬೇಳೆ ಬೇಯಬೇಕಂತೆ!

  1. ಮನಸಿನಮನೆಯವನು ಹೇಳುತ್ತಾರೆ:

    ಬರೀ ಬೆತ್ತಲೆ ಜನರ ನಡುವೆ ಬಟ್ಟೆ ತೊಟ್ಟರೆ ಮನ್ನಣೆ ಇಲ್ಲಾ .. ಸಾಲುಗಳು ನಿಜವೇನೋ ಎನಿಸುತ್ತವೆ

  2. Badarinath Palavalli ಹೇಳುತ್ತಾರೆ:

    ಕೆಲ ಮನುಜರ ಅಸಹ್ಯಕರ ಮನಸುಗಳೇ ಹಾಗೆ!
    ಅವರು ಎಲ್ಲದರಲ್ಲೂ ತಮ್ಮ ಬೇಳೆ ಬೇಯಿಸಿಕೊಳ್ಳಲು ನೋಡುತ್ತಾರೆ!!

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: