ಬೆಳಗಿ ಬೆಳಗುವ ಮುನ್ನವೇ ಆ ದೀಪ ನಂದಿತಾ?
ನಂದಿಸಿದರೇ, ತಾನೇ ನಂದಿಸಿದಳೇ ನಂದಿತಾ?
ನ್ಯಾಯಾಲಯವೇರುವ ಮುನ್ನ ಕಿಚ್ಚು ನಂದಿತಾ?
ನಂದಿಸಿದರೇ ಎಲ್ಲಾ ಸೇರಿ, ತಾನಾಗೇ ನಂದಿತಾ?
ನ್ಯಾಯದೇವತೆ ಕಣ್ಣಿದ್ದೂ ಕುರುಡಳೆಂದು ಅರಿತಿದ್ದೆವು,
ಆ-ರಕ್ಷಕರೂ ಕುರುಡರೆಂದು ಇಂದು ನಾವು ಅರಿತೆವು;
ತೀರ್ಪು ಕೊಟ್ಟಾಯ್ತು ಬಂಧಿಸದೇ ಆ ಆರೋಪಿಗಳನ್ನು
ಕೈತೊಳೆದುಕೊಂಡಾಯ್ತು ಬರೆದು ನಾಲ್ಕಕ್ಷರಗಳನ್ನು;
ವಿಷ ಸೇವಿಸಿದ ಹೆಣ್ಣು ಗೀಚಬಲ್ಲುದೇ ಆ ಅಕ್ಷರಗಳನ್ನು?
ಕೈನಡುಗಿರದೇ ನೆನೆದಾಗ ಅಮ್ಮ ಅಪ್ಪ ತಂಗಿಯನ್ನು?
ಕುಡಿಯುವ ಮೊದಲೇ ಬರೆದಿದ್ದರೆ ಕುಡಿದೆ ಎಂದಿರದು,
ಹದಿವಯಸ್ಸಿಗೆ ಅಂತಹ ಜಾಣ್ಮೆ, ನಿಜಕ್ಕೂ ಬಂದಿರದು!
ಒಂದು ಅಕಾಲಿಕ ಸಾವಿನಲ್ಲೂ ರಾಜಕೀಯ ಬೆರೆಸುವ ವ್ಯವಸ್ಥೆಗಿದೋ ಧಿಕ್ಕಾರ! 😦