ಸಖೀ,
ಪ್ರತಿಕ್ಷಣವೂ ನನ್ನ ನೆನಪಿನಲ್ಲೇ ನೀನಿರುತ್ತಿದ್ದೀ
ಅನ್ನುವ ಅರಿವು ನನಗಾಗುತ್ತಿದೆ ಕಣೇ;
ಕಣ್ರೆಪ್ಪೆಗಳು ಸುಮ್ಮನೆ ಹೊಡೆದುಕೊಳ್ಳುತ್ತಿರುತ್ತವೆ
ಬಿಕ್ಕಳಿಕೆ ಸತಾಯಿಸುವುದೂ ಇದೆ ಕಣೇ;
ಈ ಸಂಜ್ಞೆಗಳು ಹಗಲೆಲ್ಲಾ ಕಾಡುತ್ತವೆ ನನ್ನನ್ನು
ರಾತ್ರಿ ಕನಸು ನಿದ್ದೆಗೆಡಿಸುವುದಿದೆ ಕಣೇ;
ನಾನಿನ್ನ ನೆನಪಿಸುತ್ತಿರುವೆನೆಂಬುವುದನ್ನೊಪ್ಪದೇ
ನಿನ್ನ ಮೇಲೇ ಅಪವಾದ ಹಾಕುವುದಿದೆ ಕಣೇ!