ಸಖೀ,
ಧನಾತ್ಮಕ ಪ್ರಭಾವಳಿಗಳ ಪ್ರಭಾವ ಎಷ್ಟು ಅಂದರೆ
ಅವರೆಲ್ಲೋ ನಾವೆಲ್ಲೋ ಆದರೆ ಈ ಮನಸ್ಸಿಗೆ ಸದಾ ಆನಂದ
ಋಣಾತ್ಮಕ ಪ್ರಭಾವಳಿಗಳ ಪ್ರಭಾವ ಎಷ್ಟು ಅಂದರೆ
ಅವರೆಲ್ಲೋ ನಾವೆಲ್ಲೋ ಆದರೆ ಕಿರಿಕಿರಿ ಈ ಮನಸ್ಸಿಗೆ ಸದಾ;
ನಮ್ಮ ಮನಸ್ಸು ಕೆಟ್ಟರೆ, ಮನಸ್ಸಿಗೆ ಸದಾ ಇಲ್ಲೆಲ್ಲವೂ
ಕೆಟ್ಟದ್ದೇ, ಎಲ್ಲರೂ ಕೆಟ್ಟವರೇ ಕಷ್ಟ ಶಾಂತಿಯಿಂದ ಬಾಳಲು
ನಮ್ಮ ಸುತ್ತಲೂ ಒಂದು ಚಕ್ರವನ್ನು ನಿರ್ಮಿಸಿಕೊಳ್ಳಬೇಕು
ನಮ್ಮ ಮನಸ್ಸು ಸದಾಕಾಲ ಕೆಡದೇ ನಿರ್ಲಿಪ್ತವಾಗಿರಲು!