ಸಖೀ,
ಮಳೆ ಸುರಿದ ನಂತರದ ಕೆಲಹೊತ್ತು ವಾತಾವರಣ ತಂಪು
ಹಾಡನ್ನು ಆಲಿಸಿದ ಗಂಟೆಗಳ ನಂತರವೂ ಕಿವಿಗಳಲಿ ಇಂಪು
ಸಂಪರ್ಕದಲ್ಲಿದ್ದಾಗ ಭಾವನೆಗಳ ಮೇಲಾಟದಲಿ ಸದಾ ನೆನಪು
ಇದಿರಲ್ಲಿ ಇದ್ದು ಆಡಿದೆಲ್ಲಾ ಮಾತುಗಳಿಗೆ ಪ್ರತಿಕ್ರಿಯೆಗಳ ಸಂಪು;
ಮತ್ತೆ ಬಿಸಿಲು ಹೆಚ್ಚಾದಾಗ ಆ ಮಳೆ ನೀಡಿದ್ದ ತಂಪಿನ ನೆನಪಿಲ್ಲ
ಗುಂಪಿನಲ್ಲಿ ವ್ಯಸ್ಥರಾಗಿದ್ದ ವೇಳೆ ಆ ಹಾಡುಗಳ ಮಾರ್ದನಿಯಿಲ್ಲ
ಸಂಪರ್ಕ ಕಡಿದುಹೋದ ಮೇಲಾವ ಭಾವನೆಗಳಿಗೂ ಜಾಗವಿಲ್ಲ
ಇದ್ದಾಗಷ್ಟೇ ಯುದ್ಧ, ಮರೆಯಾದ ಮೇಲೆ ನೆನಪೂ ಇರುವುದಿಲ್ಲ!