ಇದೇ ನನ್ನ ಬಾಳು!

ಸಖೀ,
ಹೊಸದಾಗಿ ಅಂಟಿಕೊಂಡಾಗ ಅದ್ಯಾವುದೇ ಹವ್ಯಾಸ
ಹಗಲಿರುಳು ಕಾಡುತ್ತಾ ಆಗಿಬಿಡುತ್ತದೆ ಅದೇ ಅಭ್ಯಾಸ;

ಭಾವಗಳು ಮೂಡುವುದಕೆ ಹೊತ್ತುಗೊತ್ತೆಂಬುದೇ ಇಲ್ಲ
ಕೂಡಲೇ ಬಂಧಿಸಿಡಬೇಕು ಪದಗಳಲ್ಲಿ ಅವುಗಳನ್ನೆಲ್ಲಾ;

ಕೆಲವು ಹವ್ಯಾಸಗಳು ಕಾಲಕಳೆದಂತೆ ಮರೆಯಾಗುತ್ತವೆ
ಇನ್ನು ಕೆಲವು ಉಸಿರಿನ ಜೊತೆಗೊಂದಾಗಿ ಉಳಿಯುತ್ತವೆ;

ಕೆಟ್ಟ ಚಾಳಿಗಳನ್ನು ದೂರಮಾಡುವುದಕ್ಕಾಗಿ ಶ್ರಮಿಸಬೇಕು
ಬರೆಯುವ ಹವ್ಯಾಸವನ್ನು ಉಳಿಸಿಕೊಳ್ಳಲೂ ಶ್ರಮಿಸಬೇಕು;

ಮೂವತ್ತೇಳು ವರುಷಗಳಾದರೂ ಬಿಟ್ಟಿಲ್ಲ ನನ್ನನ್ನೀ ಗೀಳು
ತಲೆಕೆಡಿಸಿಕೊಂಡಿಲ್ಲ ಸ್ವೀಕರಿಸಿದ್ದೇನೆ, ಇದೇ ನನ್ನ ಬಾಳು!

One Response to ಇದೇ ನನ್ನ ಬಾಳು!

  1. anantharamesh ಹೇಳುತ್ತಾರೆ:

    ಬರೆಯವ ಗೀಳು ನಿಮಗೆ ಸದಾ ಇರಲಿ ಎಂದು ಹಾರೈಕೆ.

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: