ಸಖೀ,
ಬೆಳಗು ಆಯಿತೆಂದರೆ ನಮಗಾಗಿ ಕಾಯುತ್ತಿರುತ್ತವೆ
ನೂರಾರು ಸ್ನೇಹಿತರ ಉಪದೇಶದ ಮಾತುಗಳು;
ಆಹಾ ಭಾಗ್ಯವಂತರು ನಾವು, ಗೋಡೆಗಳ ಮೇಲೆ
ನಮಗಾಗಿ ತೆರೆದಿವೆ ನೋಡು ವಿದ್ಯಾಲಯಗಳು;
ಸಮಚಿತ್ತದಿಂದ ಸ್ವೀಕರಿಸುವ ಮನಸ್ಸು ಇದ್ದರೆ
ಗುರುಸಮಾನರೇ ನಮಗಿವರೆಲ್ಲಾ ಸಂಶಯವಿಲ್ಲ;
ನಾವು ಆಲಿಸುವವರಲ್ಲ ನಾವು ಹೇಳುವುದಕಷ್ಟೇ
ಎಂದನ್ನುವೆವಾದರೆ ಅದಕನ್ಯರು ಜವಾಬ್ದಾರರಲ್ಲ!