ನಾನಾಗಿರಬೇಕಿದೆ!

ಸಖೀ,
ನಕ್ಕವರೊಂದಿಗೆ ನಾನು ನಕ್ಕೆ
ಅತ್ತವರೊಂದಿಗೆ ನಾನು ಅತ್ತೆ,

ಸ್ನೇಹಿತರಿಗೆ ಸ್ನೇಹಿತನಾದೆ
ಆಪ್ತರಿಗೆ ನಾನೂ ಆಪ್ತನಾದೆ
ಪ್ರೀತಿಸಿದವರನ್ನು ಪ್ರೀತಿಸಿದೆ;

ಆದರೆ,
ದ್ವೇಷಿಸುವವರನ್ನು ನನ್ನಿಂದ
ಇಂದಿಗೂ ದ್ವೇಷಿಸಲಾಗುತ್ತಿಲ್ಲ
ಈ ಮುಖಕ್ಕೆ ಉಗಿಯುವವರ
ಮುಖಕ್ಕೆ ಉಗಿಯಲಾಗುತ್ತಿಲ್ಲ;

ಒಂದಿನಿತೂ ಮಾತನಾಡದೇ
ಸುಮ್ಮನೇ ಇದ್ದುಬಿಡಬೇಕಿದೆ,
ಅವರನ್ನೆಲ್ಲಾ ಅವರಿರುವಂಥೆ
ಇರಲು ನಾ ಬಿಟ್ಟುಬಿಡಬೇಕಿದೆ,

ಒಂದೊಮ್ಮೆ ಪ್ರಿಯರಾಗಿದ್ದವರ
ನೆನಪನ್ನು ಈ ಮನದೊಳಗೆ
ಸದಾಕಾಲ ಹಸಿರಾಗಿಯೇ
ನಾನು ಉಳಿಸಿಕೊಳ್ಳಬೇಕಿದೆ,

ಇದನ್ನು ಹೇಡಿತನ ಎಂದಂದರೂ
ನಾನು ನಾನಾಗಿಯೇ ಇರಬೇಕಿದೆ!
**********************

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: