ಸಖೀ, “ಕಳ್ಳ ನೀನು ಸುಳ್ಳ ನೀನು ಮಳ್ಳ ನೀನು” ಎಂದು ನಾನು
ಅಣಕಿಸುತಿರೆ
ಆ ರವಿಯನ್ನು
ಚಂದಿರ ಬಂದ
ನಗುನಗುತ್ತಾ
ನುಡಿದ ಕೇಳು
“ನನ್ನಷ್ಟಲ್ಲ ಬಿಡು
ಅವನ ಬೆಳಕನ್ನೇ
ಕದ್ದಿರುವೆ ನಾನು,
ಭ್ರಮೆಯಲ್ಲಿದೆ ಬುವಿ
ಈ ಬೆಳದಿಂಗಳು
ನನ್ನದು ಎಂದು,
ನೈದಿಲೆಗೂ ಭ್ರಮೆ
ನಾನು ಆಕೆಯ
ಇನಿಯನೆಂದು!”
**************
This entry was posted on ಶನಿವಾರ, ಮೇ 24th, 2014 at 9:26 ಫೂರ್ವಾಹ್ನ and is filed under ಕನ್ನಡ. You can follow any responses to this entry through the RSS 2.0 feed.
You can leave a response, or trackback from your own site.