ಹೇಗೆ ನಿಲ್ಲಿಸಲಾದೀತು? 

ಬಹಳ ಹಿಂದೆ ನಾನು ನನ್ನ ಮಾತುಗಳನ್ನು ಒಂದು ಪುಸ್ತಕದಲ್ಲಿ ಬರೆದಿಡುತ್ತಿದ್ದೆ. 

ನಂತರ, ಮುದ್ರಕಗಳು ಬಂದನಂತರ, ಬಿಳೀಹಾಳೆಗಳ ಮೇಲೆ ಮುದ್ರಿಸಿ, ರಜೆಯಲ್ಲಿ ಊರಿಗೆ ತೆರಳುವಾಗ ಜೊತೆಗೆ ಕೊಂಡೊಯ್ಯುತ್ತಿದ್ದೆ.

ಅಪ್ಪಯ್ಯನವರ ಮುಂದೆ ಓದಿಹೇಳುತ್ತಿದ್ದೆ ಹಾಗೂ ಅಮ್ಮನವರಿಗೆ ಓದಲು ನೀಡುತ್ತಿದ್ದೆ.

ನನ್ನ ಪ್ರತಿ ಮಾತನ್ನು ಓದಿ ಮುಗಿಸಿದಾಗಲೂ ಅವರೀರ್ವರ ಪ್ರತಿಕ್ರಿಯೆಗಳೂ ಗಂಭೀರ ಮೌನ.

ನೋಡಿದರೆ ಈರ್ವರ ಕಣ್ಣುಗಳಲ್ಲೂ ಆನಂದಬಾಷ್ಪ.

“ಬಹುಶಃ ನಿನ್ನ ಅಜ್ಜನಿಂದ (ಅವರ ಅಪ್ಪ) ನಿನಗೆ ಈ ಬರೆಯುವ ಕಲೆ ಬಳುವಳಿಯಾಗಿ ಬಂದಿದೆ. ಬರೆಯುವುದನ್ನು ಎಂದಿಗೂ ನಿಲ್ಲಿಸಬೇಡ. ಹೀಗೆಯೇ ಬರೆಯುತ್ತಾ ಇರು. ನಿನಗೆ ಈ ಕ್ಷೇತ್ರದಲ್ಲಿ ಒಳ್ಳೆಯ ಭವಿಷ್ಯವಿದೆ” ಎಂದು ಅಮ್ಮ ಹರಸುತ್ತಿದ್ದರು. ಅಪ್ಪಯ್ಯನವರೂ ಅಮ್ಮನವರ ಮಾತಿಗೆ ದನಿಗೂಡಿಸುತ್ತಿದ್ದರು.

ಅಪ್ಪಯ್ಯನವರ ಅಗಲಿಕೆಯ ನಂತರ, ಅಮ್ಮ, ಅಜ್ಜಯ್ಯನವರ ಹೆಸರಿನ ಜೊತೆಗೆ ಅಪ್ಪಯ್ಯನವರ ಹೆಸರನ್ನೂ ಸೇರಿಸಿ ಹರಸುತ್ತಿದ್ದರು.

ಬರೆಯುವುದನ್ನು ನಾನು ನಿಲ್ಲಿಸಿಲ್ಲ. ನಿಲ್ಲಿಸುವುದೂ ಇಲ್ಲ.

ನನ್ನಲ್ಲಿ ಉಸಿರಿರುವವರೆಗೂ ನಿಲ್ಲಿಸಲಾರೆ. ಇದಂತೂ ಸತ್ಯ.

ಇದು ನನ್ನ ಅಮ್ಮನವರ, ಅಪ್ಪಯ್ಯನವರ ಮನದ ಆಶಯ.

ಅಲ್ಲದೆ ನನಗೆ ಇದು ಸುಲಭಸಾಧ್ಯವೂ ಹೌದು.

ಹೇಗೆ ನಿಲ್ಲಿಸಲಾದೀತು?

One Response to ಹೇಗೆ ನಿಲ್ಲಿಸಲಾದೀತು? 

  1. Badarinath Palavalli ಹೇಳುತ್ತಾರೆ:

    ಇಲ್ಲಿಯವರೆಗೂ ತಮ್ಮ ಬರಹಗಳನ್ನು ಓದಿದಾಗ ಅದರ ಸ್ವಭಾವತಃ ಸುಲಭವಾಗಿ ಓದಿಸಿಕೊಂಡು ಹೋಗುವ ಶೈಲಿ ಮತ್ತು ಅದರ ಅಂತರ್ಗತ ಅಡಕವಾದ ಮನೋ ಪರಿವರ್ತಕ, ಪ್ರೇಮ ಸ್ಥಿರಾಕಾಂಕ್ಷೆ, ವೈವಾಹಿಕ ಅನುಬಂಧಗಳು ಮನಸ್ಸಿಗೆ ಇಷ್ಟವಾಗುತ್ತ ಹೋದವು.

    ನಿಮ್ಮ ಬರಹಗಳನ್ನು ನಮಗಾಗಿಯೂ ಮುಂದುವರೆಸಿಕೊಂಡು ಹೋಗಿರಿ…

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: