ಸಖೀ,
ಅರುಹುವವರ ಮಾತನ್ನು ಆಲಿಸುವ ತಾಳ್ಮೆ ಇರಬೇಕು
ಪೂರ್ತಿ ಆಲಿಸದೇ ನಾವವರ ಮೇಲೇಕೆ ಮುನಿಯಬೇಕು
ಅರುಹುವವರಿಗೆ ಅರಿವಿಲ್ಲ ಎಂಬುದ ನಾವರಿಯಲಾಗದು
ಅರುಹಿದ ಮಾತನ್ನರ್ಥೈಸಿಕೊಳ್ಳದೇ ನಿರ್ಧರಿಸಲಾಗದು
ಮಾತು ಕಿವಿಯಿಂದ ಮನಕ್ಕಿಳಿದು ಮಂಥನ ನಡೆಯಬೇಕು
ಅರ್ಥ ಅನರ್ಥ ಅಪಾರ್ಥಗಳ ವಿಮರ್ಶೆ ನಡೆಯಲೇಬೇಕು
ತರಾತುರಿಯಿಲ್ಲದೇ ಮಾತಿಗೆ ತಕ್ಕ ಪ್ರತಿಕ್ರಿಯೆ ಮೂಡಬೇಕು
ಮಾತುಗಳೇ ಅಸಾಧ್ಯವಾದಾಗ ಮೌನವನಪ್ಪಿಕೊಳ್ಳಬೇಕು!