ಹೃದಯ-ಮನಸ್ಸು-ಬುದ್ಧಿ!

ಮನಸ್ಸು ತನ್ನ ಬಯಕೆಗಳನು ಪೂರೈಸಿಕೊಳ್ಳುವ ಯತ್ನದಲಿ
ಸಾಗುವುದು ಬಲುದೂರ ಬಿಟ್ಟು ಬುದ್ಧಿಯನದದರ ಸ್ಥಾನದಲಿ

ಬುದ್ಧಿ ನಗುವುದು ಕಂಡಾಗಲೆಲ್ಲಾ ಮನದ ಹುಚ್ಚಾಟಗಳನು 
ಮನ ಬಚಾವಾಗುವುದು ಎಲ್ಲದಕೂ ದೂಷಿಸಿ ಹೃದಯವನು

ಬುದ್ಧಿ ಅರಿತಂತೆ ಮನ ಅರಿಯದು ಹೃದಯದ ಮಾತುಗಳನು
ಮನ ಸದಾ ಅರಿಯುವುದು ತನಗೆ ಬೇಕಾದಂತೆ ಅವುಗಳನು

ಮನಸ್ಸು ವಿಮರ್ಶಾಶಕ್ತಿಯೇ ಇಲ್ಲದ ಭಾವುಕ ಮಗುವಿನಂತೆ
ಬುದ್ಧಿ ಮಗುವನ್ನು ಸದಾ ಎಚ್ಚರಿಸುತ್ತಿರುವ ಮಾತಾಪಿತರಂತೆ

ಹೃದಯದ ಸತ್ಯವನು ತಾನು ಅರಿಯಲದರ ಮೂಲ ರೂಪದಲಿ
ಮನಸ್ಸು ತಾ ಸದಾ ನೆಲೆ ನಿಂತಿರಬೇಕು ಬುದ್ಧಿಯ ಆಸ್ಥಾನದಲಿ

Advertisements

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: