ಅಂದು ಅನಗತ್ಯವಾಗಿ ಹೊಗಳಿ ಅಟ್ಟಕ್ಕೇರಿಸಿತ್ತೆನ್ನನು ಆ ದಂಡು
ಬಿದ್ದಾಗ ಆಳಿಗೊಂದು ಕಲ್ಲು, ಬೆಚ್ಚಿದೆ ಅವರನ್ನೇ ಅಲ್ಲಿ ನಾ ಕಂಡು
ನಮ್ಮವರೆಂಬ ಭಾವ ಮೂಡಿದರೆಗಳಿಗೆಯಲ್ಲೇ ದೂರವಾಗಬಹುದು
ಎಂದೂ ನುಡಿಯದ ಮೌನಿ ಆಪತ್ಕಾಲದಲಿ ಒಲವ ಸುರಿಸಬಹುದು
ನಂಬಲು ಆಗುವುದಿಲ್ಲ ಎಲ್ಲರನ್ನೂ ಸದಾಕಾಲ ನಾವಿಲ್ಲಿ ಸುಮ್ಮನೇ
ಅನುಮಾನ ಪಡುತ್ತಿರಲೂ ಆಗದು ಎಲ್ಲರ ಮೇಲೆ ಸುಖಾಸುಮ್ಮನೇ
ನಂಬಿಕೆ ಅನುಮಾನಗಳ ಮಧ್ಯದ ದಾರಿಯ ಹುಡುಕಿಕೊಳ್ಳಲು ಬೇಕು
ಅದಕ್ಕಾಗಿ ವಿಮರ್ಶಾಶಕ್ತಿಯನ್ನು ನಮ್ಮೊಳಗೆ ಬೆಳೆಸಿಕೊಂಡಿರಬೇಕು!