ನಿನ್ನನ್ನೂ ಅರಿತಿದ್ದೇನೆ!

 

“ನೀನಿರಲು ನಿನ್ನೊಂದಿಗೆ ನಾ ಬಾಳುತ್ತಿದ್ದೆ ಕಣೇ 
ಈಗ ನಿನ್ನ ನೆನಪುಗಳೊಂದಿಗೆ ಬದುಕುತ್ತಿದ್ದೇನೆ
ಬದುಕಲು ಅಷ್ಟು ಸಾಕೆಂದು ನಾನು ಅರಿತಿದ್ದೇನೆ;

ಪ್ರತಿ ಕ್ಷಣ ಪ್ರತಿಹೆಜ್ಜೆ ನಿನ್ನ ನೆನಪುಗಳು ನನ್ನನ್ನು
ಕಾಡುತ್ತಿರುವುದು ಸುಳ್ಳಲ್ಲ, ನೀನು ಬರುವುದಿಲ್ಲ
ಅನ್ನುವುದರರಿವಿದ್ದರೂ ಸದಾ ಕಾಯುತ್ತಿರುತ್ತೇನೆ!”

“ಹೂಂ ನನ್ನೊಂದಿಗೆ ನೀನು ಬಾಳುತ್ತಿದ್ದೆ ಹೌದು
ನೆನಪಿನೊಂದಿಗೀಗ ಬದುಕುತ್ತಿರುವುದೂ ಹೌದು
ಆದರೆ ಮರುಳಾ, ನಾನೂ ನಿನ್ನನ್ನು ಅರಿತಿದ್ದೇನೆ;

ಇನ್ನಾರದೋ ಕಿವಿಯಲ್ಲಿ ಈ ನುಡಿಗಳನ್ನು ನೀನು
ನಿರಾಯಾಸವಾಗಿ ನುಡಿಯಬಲ್ಲೆ ಅನ್ನುವುದನ್ನು
ನಾನು ನಿನಗಿಂತಲೂ ಚೆನ್ನಾಗಿ ಅರಿತವಳಿದ್ದೇನೆ!”

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: