ನನ್ನ ಹಿತೈಷಿ ಮಿತ್ರರೋರ್ವರು ನನಗೆ ಸಲಹೆ ನೀಡಿದಾಗ!

 

“ಆಸು, ನಮಸ್ಕಾರ. ನಿಮಗೊಂದು ಮಾತು ಹೇಳಲಾ?”

“ನಮಸ್ಕಾರ. ಹೇಳಿ. ತಮಗೆ ಒಂದು ಅಲ್ಲ ನಾಲ್ಕಾರು ಮಾತು ಹೇಳಲೂ ಅನುಮತಿ ಇದೆ”.

“ಏನಿಲ್ಲ. ನಿಮ್ಮ ಮಾತುಗಳನ್ನು ಬಹಳ ದಿನಗಳಿಂದ ಓದುತ್ತಿದ್ದೇನೆ. ಈಗ ಹೇಳಬೇಕು ಅನಿಸಿತು. ನನ್ನ ಸಲಹೆ ಇಷ್ಟೇ. ಸಾಮಾನ್ಯ ಓದುಗರಿಗೆ ತಮ್ಮ ಮೊದಲ ಓದಿನಲ್ಲೇ ಅರ್ಥವಾಗದಂತಹ ಪದಗಳನ್ನು ಹೆಚ್ಚು ಬಳಸಿ ನೋಡಿ. ದಿನಬಳಕೆಯ ಪದಗಳನ್ನು ಆದಷ್ಟು ಕಡಿಮೆ ಮಾಡಿ. ಓದಿದಾಗ ಇದರಲ್ಲೇನೋ ವಿಶೇಷತೆ ಇದೆ, ಅದ್ಯಾವುದೋ ಗೂಢಾರ್ಥ ಇದೆ ಎಂದು ಓದುಗರಿಗೆ ಅನಿಸುವಂತೆ ಮಾಡಿ”. 

“ಅದು ಸರಿಯೇನೋ. ಆದರೆ ಹಾಗೆ ಯಾಕೆ ಮಾಡಬೇಕು? ಅದರಿಂದ ಏನು ಪ್ರಯೋಜನ ನನಗೆ?”

“ಸಾಕಷ್ಟು ಓದುಗರು ತಾವು ಇದನ್ನು ಓದಿದ್ದೇವೆ ಎಂಬುದನ್ನು ತೋರಿಸಿಕೊಳ್ಳುವ ಪ್ರಯತ್ನ ಮಾಡುತ್ತಾರೆ ಹಾಗಾಗಿ ನಿಮ್ಮ ಮಾತುಗಳನ್ನು ಇತರರೊಂದಿಗೆ ಹಂಚಿಕೊಳ್ಳುತ್ತಾರೆ. ಅಲ್ಲಲ್ಲಿ, ಅಗತ್ಯ ಇರಲೀ ಇಲ್ಲದೇ ಇರಲೀ, ನಿಮ್ಮ ಮಾತುಗಳನ್ನು ಹಾಗೂ ನಿಮ್ಮ ಹೆಸರನ್ನು ಉದ್ಧರಿಸುತ್ತಾರೆ”.

“ಆದರೆ ನನಗೆ ಪ್ರಯೋಜನ ಏನು?”

“ನಿಮಗೆ ಪ್ರಚಾರ ಸಿಗುತ್ತದೆ. ನಿಮ್ಮನ್ನು ಸಭೆ ಸಮಾರಂಭಗಳಿಗೆ ಆಹ್ವಾನಿಸಬಹುದು. ಮುಂದೊಂದು ದಿನ ನಿಮಗೆ ಪ್ರಶಸ್ತಿ ಸಿಗಲೂಬಹುದು”.

“ಆದರೆ ನನ್ನ ಉದ್ದೇಶ ಪ್ರಶಸ್ತಿ ಪಡೆಯುವುದೂ ಅಲ್ಲ, ಸಮಾರಂಭಗಳಲ್ಲಿ ಪಾಲುಗೊಳ್ಳುವುದೂ ಅಲ್ಲ”.

“ಮತ್ತೆ ಯಾಕೆ ಬರೆಯುತ್ತೀರಿ? ಸುಮ್ಮನೆ ಬೇರೆ ಕೆಲಸವಿಲ್ಲವೇ ನಿಮಗೆ?”

“ಹೂಂ. ಸರಿಯಾಗಿ ಹೇಳಿದಿರಿ. ಬೇರೆ ಕೆಲಸ ಇಲ್ಲ ನನಗೆ. ನನ್ನ ದಿನದ ಕೆಲಸಗಳು ಮುಗಿದ ಮೇಲೆ, ನನ್ನ ಪುರುಸೊತ್ತಿನ ಹೊತ್ತಿನಲ್ಲಿ, ಯಾವ ದುರಭ್ಯಾಸಗಳೂ ಇಲ್ಲದ ನಾನು, ನನ್ನ ಈ ಹವ್ಯಾಸದೊಂದಿಗೇ ನನ್ನ ಸಮಯವನ್ನು ಸದ್ವಿನಿಯೋಗಗೊಳಿಸುತ್ತಿರುತ್ತೇನೆ ಅನ್ನುವ ನಂಬಿಕೆಯಲ್ಲಿ ನಾನಿದ್ದೇನೆ. ಅದರಿಂದ ನನ್ನ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ. ಇನ್ನು ಸಮಾರಂಭಗಳಲ್ಲಿ ವೇದಿಕೆಯ ಮೇಲಿರುವುದಕ್ಕಿಂತ, ವೇದಿಕೆಯ ಮುಂದೆ ಆಸೀನನಾಗುವುದೇ ನನಗೆ ಇಷ್ಟ. ಅದರಿಂದ ನನಗೆ ಕಲಿಯಲು ಹಾಗೂ ಬರೆಯಲು ಸಾಕಷ್ಟು ವಿಷಯಗಳು ದೊರೆಯುತ್ತವೆ. ನನ್ನ ಹವ್ಯಾಸಗಳಿಗಾಗಿ ಪ್ರಶಸ್ತಿ ಪುರಸ್ಕಾರಗಳ ನಿರೀಕ್ಷೆಯಲ್ಲಿ ನಾನಿಲ್ಲ. ಈಗ ಯಾವ ಪ್ರಶಸ್ತಿಗೆ ಯಾವ ಬೆಲೆ ಉಳಿದಿದೆ ಹೇಳಿ. ಪ್ರಶಸ್ತಿ ಪಡೆದು ಉಗಿಸಿಕೊಳ್ಳುವುದಕ್ಕಿಂತ, ಹಾಗೇ ಉಗಿಸಿಕೊಳ್ಳುವುದು ಒಳ್ಳೆಯದು ಅಲ್ಲವೇ?”.

“ಏನೋ ನಿಮ್ಮ ಇಷ್ಟ. ನಿಮ್ಮ ಏಳಿಗೆಗಾಗಿ ನಾನು ನಾಲ್ಕು ಮಾತು ಹೇಳಿದರೆ, ನನಗೇ ಮರುತ್ತರ ಕೊಡುತ್ತಿದ್ದೀರಿ. ನನ್ನ ಮನೆಯಲ್ಲಿ ಇರುವ ಅಷ್ಟೊಂದು ಪ್ರಶಸ್ತಿ ಪುರಸ್ಕಾರಗಳನ್ನು ನೋಡಿದಾಗ ನಿಮಗೆ ಏನೂ ಅನಿಸೋದಿಲ್ಲವೇ? ನಿಮಗೂ ಬೇಕು ಅಂತ ಅನಿಸೋದಿಲ್ಲವೇ?”

“ಇಲ್ಲ ಇಲ್ಲ. ಬೇರೆಯವರಲ್ಲಿ ಇರುವುದು ನನಗೂ ಸಿಗಬೇಕೆಂಬ ಆಸೆ ನನ್ನಲ್ಲಿ ಮೂಡುವುದೇ ಇಲ್ಲ. ನನ್ನ ಯೋಗ್ಯತೆ, ಅರ್ಹತೆಗನುಗುಣವಾಗಿ ನನಗೆ ದಕ್ಕುತ್ತಾ ಇದೆ. ಅದಷ್ಟೇ ಸಾಕು. ಅದರಿಂದಲೇ ನನಗೆ ತೃಪ್ತಿ ಇದೆ. ತಮ್ಮ ಸಲಹೆಗಳಿಗಾಗಿ ಧನ್ಯವಾದಗಳು”.

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: