ಧತ್ ತೆರೀ ಕಿ…!

 

“ಬಾರೋ ಪ್ರೇಮ್… ಏನೋ ಹೆಂಗಿದ್ದೀಯಾ? ಮುಗೀತಾ ಪ್ರತಿಭಟನೆ?”

“ಮೈಕೈ ಎಲ್ಲಾ ನೋವು ಕಣಮ್ಮಾ… ಹಗಲಿಡೀ ಆ ಪ್ರತಿಭಟನೆ, ಮೆರವಣಿಗೆ ಅಂತ ಸಕತ್ ಸುಸ್ತಾಯ್ತು…”

“ಸರಿ ಬಿಸಿ ಬಿಸಿ ಕಾಫಿ ಕುಡಿ ಎಲ್ಲಾ ಸರಿ ಹೋಗುತ್ತೇ… ಕೇಳ್ತೇನೇ… ಎರಡು ಕಪ್ ಸ್ಟ್ರಾಂಗ್ ಕಾಫಿ ತಗೊಂಬಾರೇ, ನಮ್ ಪ್ರೇಮ್ ಬಂದಿದಾನೆ. ಸರಿ ಪ್ರೇಮ್ ಒಂದು ಮಾತ್ ಹೇಳೋ”

“ಏನದು?”

“ಅಲ್ಲಯ್ಯಾ ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಕಂಬಾರರಿಗೇ ಅರಿವಿಲ್ಲ ಹಂಗೇ ಹಿಂಗೇ ಅಂತ ಜಾಡಿಸಿದ್ದೀಯಲ್ಲಾ… ಅವರ ಕೃತಿಗಳನ್ನೇನಾದರೂ ಓದಿದ್ದೀಯಾ”

“ಇಲ್ಲ ಕಣಯ್ಯಾ … ಯಾರೋ ಹೇಳಿಕೊಟ್ರು… ಮೈಕ್ ಕೈಗೆ ಕೊಟ್ರು… ಮಾತಾಡು ಅಂದ್ರು, ಮಾತಾಡಿದೆ… ಯಾರ ಬಗ್ಗೆ ಮಾತಾಡಿದ್ದು ಅಂತ ಆಮೇಲೆ ಗೊತ್ತಾಯ್ತು ನನಗೆ”

“ಸತ್ಯ ಹೇಳು ನೀನು ಡಬ್ಬಿಂಗ್ ವಿರೋಧೀನೋ ಡಬ್ಬಿಂಗ್ ಪರನೋ? ಡಬ್ಬಿಂಗ್ ಬಂದ್ರೆ ಏನ್ ಕಷ್ಟ ಆಗುತ್ತೆ ಅಂತ ನಿಜವಾಗ್ಲೂ ಗೊತ್ತ ನಿನಗೆ”

“ಇಲ್ಲ ಮಾರಾಯಾ… ಗುಂಪಿನಲ್ಲಿ ಗೋವಿಂದ ಅಂತಾರಲ್ಲಾ ಹಂಗೇ ಕಣಯ್ಯಾ… ಎಲ್ಲರೂ ವಿರೋಧ ಮಾಡ್ತಾ ಇರೋವಾಗ ನಾನು ಮಾಡಿಲ್ಲ ಅಂದ್ರೆ ನಾಕು ವರ್ಷಕ್ಕೊಂದು ಸಿಗೋ ಚಿತ್ರಾನೂ ಸಿಗೋಲ್ಲ ನನಗೆ… ಇದು ಬಿಟ್ರೆ ಬೇರೇನೂ ಗೊತ್ತಿಲ್ಲ ನನಗೆ”

“ಎಲ್ರೂ ನಿನ್ನಂಥವರೇನಾ… ಅಲ್ಲಿ?”

“ಹೂಂ ಕಣಯ್ಯಾ ನೂರಕ್ಕೆ ತೊಂಬತ್ತು ಮಂದಿ ನನ್ನಂಥವರೇ”

“ಸರಿ ನೀನು ಈಗ ಮಾತಾಡಿದ್ದೆಲ್ಲಾ ವಾಯ್ಸ್ ರೆಕಾರ್ಡ್ ಆಗಿದೆ ನನ್ನ ಮೊಬೈಲಿನಲ್ಲಿ … ಟಿವಿಯವರಿಗೆ ಕೊಡ್ತೇನೆ… ಕಾಯ್ತಾ ಇರು… ಕಂಬಾರರಿಗೆ, ಸಾಹಿತಿಗಳಿಗೆ ಬೈತೀಯಾ… ನಿನ್ನ ಮುಖಕ್ಕೆ ಮಂಗಳಾರತಿ ಮಾಡಿಸ್ತೀನಿ ಇರು… ಇನ್ನು ಯಾವತ್ತೂ ಸಾಹಿತಿಗಳ ಬಗ್ಗೆ ಕೀಳಾಗಿ ಮಾತಡಬಾರದು ನೀನು, ಹಾಗೆ ಮಾಡ್ತೀನಿ ಇರು”

“ದಮ್ಮಯ್ಯ ಕಣಯ್ಯಾ ಹಂಗೇನಾರೂ ಮಾಡೀಯಾ… ನಿನ್ ಕಾಲ್ ಹಿಡೀತೀನಿ…”

“ಕಾಲು ಬಿಡು… ಹೋಗಾಚೆ .. ನನ್ನ ಕಾಲು ಬಿಡು … ಕಾಲು ಬಿಡು … ಹೋಗೋ… ಸರಿ … ಏನು ಮಾಡೋಲ್ಲ… ಹೋಗು … ನನ್ನ ಕಾಲು ಬಿಡೋ … ಮಾರಾಯಾ”

“ರೀ ಏನಾಯ್ತು ರೀ ಮತ್ತೆ ಕನಸಾ… ಯಾರ್ರೀ ನಿಮ್ಮ ಕಾಲು ಹಿಡಿದುಕೊಂಡವ್ರು?”

“ಧತ್ ತೆರೀ ಕಿ ಇದೂ ಕನಸಾ?”

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: