ಕೆಲವರು ಸದಾ
ತಾವು ಏನೋ
ದೊಡ್ಡ “ಇದು”
ಅಂದುಕೊಂಡು,
ಯಾವಾಗಲೂ
“ಇದು” ಮಾಡ್ತಾ
ಇರ್ತಾರೆ.
ಅವರಿಗೆ ಒಂಚೂರು
“ಇದು” ಆದರೂ ಸಾಕು
“ಇದ”ನ್ನೇ ದೊಡ್ಡ
“ಇದು” ಮಾಡ್ತಾರೆ.
ಛೇ… ನೀವು ಬರೀ
“ಇದು” ಎಂದು
ಗೊತ್ತಿರಲಿಲ್ಲ ನನಗೆ,
ನಾನು ನಿಮ್ಮನ್ನು
ನಾಲ್ಕು ಜನರ ಮುಂದೆ
“ಇದು” ಮಾಡುತ್ತೇನೆ
ಅಂದರೆ, ನಿಮಿಷ್ಟ
ನೀವು “ಇದು” ಮಾಡಿ,
ಆದರೆ ದಯವಿಟ್ಟು
“ಇದ”ನ್ನೇ ದೊಡ್ಡ
“ಇದು” ಮಾಡಿ
ನಾಲ್ಕು ಜನರ
ಮುಂದೆ ನನಗೆ
“ಇದು” ಇಲ್ಲದಂತೆ
ಮಾಡಬೇಡಿ
ಎಂದು ಬೇಡುತ್ತಾರೆ.
ಈಗ ನೀವೇ “ಇದ”ನ್ನು
“ಇದು” ಅಗದಂತೆ ಓದಿ
“ಇದ”ಕ್ಕೆ ಏನಾದರೂ
“ಇದು” ಮಾಡಿಬಿಡಿ!