“ರೀ ಕನ್ನಡ ನಾಡಿನ ಸಂಸ್ಕೃತಿಯನ್ನು ಉಳಿಸುತ್ತಾ ಇರುವವರು, ಕಾಪಾಡುತ್ತಾ ಇರುವವರು ಯಾರು?”
“ಯಾರೋ ಯಾಕೆ ಕಾಪಾಡುತ್ತಾರೆ? ನಾವೇ ಕಾಪಾಡಬೇಕು”
“ನಾವಲ್ಲ ನಮ್ಮ ಚಿತ್ರರಂಗದ ಮಂದಿ, ಅದೂ “ಸ್ವಮೇಕ್” ಅಂತಾರಲ್ಲಾ ಆ ಚಿತ್ರರಂಗದ ಮಂದಿ”
“ಅದು ಹೇಗೆ ಗೊತ್ತಾಯ್ತು ನಿನಗೆ?”
“ಡಬ್ಬಿಂಗ್ ಬಂದ್ರೆ ನಮ್ಮ ಸಂಸ್ಕೃತಿ ಕೆಡುತ್ತದೆ ಅನ್ನುವವರು ಅವರೇ ಅಲ್ಲವೇ? ಹಾಗಾದರೆ “ಲಾಜಿಕಲೀ” ಈಗ ನಮ್ಮ ನಾಡಿನ ಸಂಸ್ಕೃತಿ ಉಳಿದಿರುವುದು ಅವರ ಚಿತ್ರಗಳಿಂದಲೇ ಅಲ್ಲವೇ? ನಿಮಗೆ ಇವೆಲ್ಲಾ ಅರ್ಥ ಆಗೋದೇ ಇಲ್ಲ ಬಿಡಿ”
“ಇರಬಹುದೇನೋ, ನನಗೆ ಅರ್ಥ ಆಗೋಲ್ಲ ಅನ್ನುವುದು ಸರಿ ಅನ್ಸುತ್ತೆ. ಆದರೆ ನನಗ್ಯಾಕೋ ರೋಡಿಗಿಳಿ ರಾಧಿಕಾ, ಅಮ್ಮ ಲೂಸಾ- ಅಪ್ಪ ಲೂಸಾ, ಒಳಗೆ ಸೇರಿದರೆ ಗುಂಡು, ಆಸೆ ಹೇಳುವಾಸೆ, ಈ ಎಲ್ಲಾ ಹಾಡುಗಳು ಒಟ್ಟೊಟ್ಟಿಗೇ ನೆನಪಾಗ್ತಿವೆ ಕಣೇ”