ನಿನ್ನ ಕಂಗಳಲ್ಲಿ ಕಂಪನ್ನೀವ ರಹಸ್ಯವಿದೆ!

 

ಇನ್ನೊಂದು ಹಿಂದೀ ಗೀತೆಯ ಭಾವಾನುವಾದದ ಯತ್ನ:
(ಆಪ್ ಕೀ ಆಂಖೋಂ ಮೆ ಕುಛ್ ಮೆಹಕೀ ಹುವೀ ಸೀ ರಾಝ್ ಹೈ)

ನಿನ್ನ ಈ ಕಂಗಳಲ್ಲಿ ಅದೇನೋ ಕಂಪನ್ನೀವ ರಹಸ್ಯವಿದೆ
ನಿನಗಿಂತಲೂ ನಿನ್ನ ನೋಟವೇ ಬಲು ಸುಂದರವಾಗಿದೆ
ನಿನ್ನ ಈ ಕಂಗಳಲ್ಲಿ ಅದೇನೋ ಕಂಪನ್ನೀವ ರಹಸ್ಯವಿದೆ

ಅಧರಗಳು ಅಲುಗಿದರೆ ಹೂಗಳು ಅರಳುತ್ತವೆ ಅವೆಲ್ಲೋ
ನಿನ್ನ ಕಂಗಳೊಳಗಿಂದಲೇ ತಟವನ್ನು ಸೇರಬಹುದೆಲ್ಲೋ
ನಿನ್ನೀ ಮೌನವೇ ಸ್ವರವಾಗಿ ನನ್ನ ಕಾಡುತ್ತಿದೆಯಲ್ಲೋ

ನಿನ್ನ ಈ ಕಂಗಳಲ್ಲಿ ಅದೇನೋ ಕಂಪನ್ನೀವ ರಹಸ್ಯವಿದೆ
ನಿನಗಿಂತಲೂ ನಿನ್ನ ನೋಟವೇ ಬಲು ಸುಂದರವಾಗಿದೆ
ನಿನ್ನ ಈ ಕಂಗಳಲ್ಲಿ ಅದೇನೋ ಕಂಪನ್ನೀವ ರಹಸ್ಯವಿದೆ

ನಿನ್ನೀ ಮಾತುಗಳಲ್ಲಿನ್ನೇನೋ ತುಂಟಾಟ ಅಡಗಿಲ್ಲ ತಾನೇ
ನಿನ್ನ ಹವ್ಯಾಸವಲ್ಲ ಹೊಗಳುವುದು ಹೀಗೆ ಸುಖಾಸುಮ್ಮನೇ
ಇದೂ ನಿನ್ನ ಮೋಸದಾಟದ ಹೊಸದೊಂದು ಶೈಲಿಯೇನೋ

ನಿನ್ನ ಈ ಕಂಗಳಲ್ಲಿ ಅದೇನೋ ಕಂಪನ್ನೀವ ರಹಸ್ಯವಿದೆ
ನಿನಗಿಂತಲೂ ನಿನ್ನ ನೋಟವೇ ಬಲು ಸುಂದರವಾಗಿದೆ
ನಿನ್ನ ಈ ಕಂಗಳಲ್ಲಿ ಅದೇನೋ ಕಂಪನ್ನೀವ ರಹಸ್ಯವಿದೆ

2 Responses to ನಿನ್ನ ಕಂಗಳಲ್ಲಿ ಕಂಪನ್ನೀವ ರಹಸ್ಯವಿದೆ!

  1. ಬದರಿನಾಥ ಪಳವಳ್ಳಿಯ ಕವನಗಳು ಹೇಳುತ್ತಾರೆ:

    SD ಬರ್ಮನ್ ಅವರ ಸಂಗೀತ ಘರ್ ಚಿತ್ರಕ್ಕೆ ಕಳಶಪ್ರಾಯದಂತಿದೆ.
    ಗುಲ್ಜಾರರ ಸಾಹಿತ್ಯಕ್ಕೆ ತಮ್ಮ ಭಾವಾನುವಾದವೂ ಒಪ್ಪುವಂತಿದೆ.
    ನಂದೋ ಬಟ್ಟಾಚಾರ್ಯ ಅವರು ಸಿಪ್ಪೀಯವರ ಈ ಚಿತ್ರಕ್ಕೆ ಛಾಯಾಗ್ರಾಹಕರು.

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: