ಕಷ್ಟ… ಕಷ್ಟ… ಕಷ್ಟ!

“ಯಾಕೋ ಮನಸ್ಸಿಗೆ ತುಂಬಾ ಬೇಸರ ಆಗುತ್ತಿದೆ”

“ಯಾಕೆ ಏನಾಯ್ತು? ಯಾರಾದರೂ ಏನಾದರೂ ಅಂದ್ರಾ?”

“ಇಲ್ಲ… ಏನೂ ಅನ್ನಲಿಲ್ಲ… ಅದಕ್ಕೇ ಬೇಸರ”

“ಯಾರದು, ಏನೂ ಅನ್ನದವರು?”

“ನಾನು ಹೊಸವರುಷದ ಮೊದಲ ದಿನ ಬಿಡುವಿಲ್ಲದೇ ಇದ್ದೆ. ಯಾರಿಗೂ ಶುಭ ಹಾರೈಸಿರಲಿಲ್ಲ”

“ಸರಿ ಅದರಿಂದೇನಾಯ್ತು. ಸಂದೇಶಗಳಿಗೆ ಒಂದು ರೂಪಾಯಿ ಖರ್ಚಾಗುತ್ತದೆ. ಈಗ ಯಾರೂ ಶುಭ ಹಾರಿಸುವುದೇ ಇಲ್ಲ. ಹೊಸತೇನಿಲ್ಲ ಬಿಡು. ಅದೇನಿದೆಯೋ ಬೇಗ ಬೇಗ ಹೇಳು… ಸುತ್ತಿ ಬಳಸಿ ಕತೆ ಕಟ್ಟಿಕೊಂಡು ಹೇಳ್ಬೇಡ”

“ಅವರಿಂದಲೂ ಸಂದೇಶವಾಗಲೀ ಕರೆಯಾಗಲೀ ಬಂದಿರಲಿಲ್ಲ… ಮಾರನೇದಿನ ನನಗೆ ಪುರುಸ್ತೊತ್ತಾಯ್ತು. ಆದರೂ, ಅಷ್ಟರೊಳಗೆ, ಅವರು ಕರೆ ಮಾಡಿಲ್ಲವಲ್ಲಾ, ಮತ್ತೆ ನಾನ್ಯಾಕೆ ಮಾಡಲಿ ಅನ್ನುವ ಭಾವ ನನ್ನ ಮನದೊಳಗೆ ತುಂಬಿಕೊಂಡು ಬಿಟ್ಟಿತ್ತು. ಅವರೇ ಮಾಡಲಿ ಎಂದು ಸುಮ್ಮನಿದ್ದೆ. ಆದರೆ ಪ್ರತಿದಿನ ಕಾಯುತ್ತಲೂ ಇದ್ದೆ, ಆ ಮಾತು ಬೇರೆ”.

“ಇಂದು ಕರೆ ಬಂತು… ತನಗೆ ಪುರುಸೊತ್ತಿರಲಿಲ್ಲ ಎಂದು ಹೇಳಿದ್ದಲ್ಲದೇ, ತನಗೆದುರಾಗಿದ್ದ ಸಮಸ್ಯೆಗಳ ಬಗ್ಗೆಯೂ ಹೇಳಿಕೊಂಡು ಕ್ಷಮೆ ಕೇಳಿದಾಗ, ಅದೂ ಅಲ್ಲದೇ, ನನ್ನ ಸಂದೇಶವಾಗಲೀ ಕರೆಯಾಗಲಿ ಏಕೆ ಬಂದಿರಲಿಲ್ಲ ಅನ್ನುವ ಪ್ರಶ್ನೆಯನ್ನೇ ಕೇಳದಿದ್ದಾಗ ನಾನು ಕುಬ್ಜನಾಗಿಬಿಟ್ಟೆ… ಮನಸ್ಸಿಗೆ ಬೇಸರವಾಯ್ತು”.

“ಅಯ್ಯೋ … ಅಷ್ಟು ಬೇಸರ ಪಟ್ಟುಕೊಂಡು ಸಾಯ್ಬೇಡ… ನೀನೂ ಎಲ್ಲವನ್ನೂ ಹೇಳಿಬಿಡು. ಕ್ಷಮೆ ಕೇಳಿಬಿಡು… ಅಷ್ಟೇ… ಸಂಬಂಧಗಳನ್ನು ಅಷ್ಟು ಸುಲಭವಾಗಿ ಸಾಯಲು ಬಿಡಬಾರದು”.

“ಹೂಂ…”.

Advertisements

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: