ಆತ ಮತ್ತು ಆಕೆ ಸಹೋದ್ಯೋಗಿಗಳು.
ಅವರಿಬ್ಬರ ನಡುವೆ ಸ್ನೇಹವಾಯ್ತು.
ಚಹಾ, ತಿಂಡಿ, ಊಟ ಎಲ್ಲವಕ್ಕೂ ಒಟ್ಟೊಟ್ಟಿಗೇ ಇರತೊಡಗಿದರು.
ಒಟ್ಟೊಟ್ಟಿಗೇ ಊರೆಲ್ಲಾ ಅಡ್ಡಾಡಿದರು.
ಅವರ ಸ್ನೇಹ ಪ್ರೀತಿಯಾಯ್ತು.
ಆ ಪ್ರೀತಿ ಪ್ರೇಮವಾಯ್ತು.
ಸಂಸ್ಥೆಯಲ್ಲಿ ಸುದ್ದಿಯಾಯ್ತು.
ಅವರು ಮದುವೆಯಾಗಲಿರುವ ಸುದ್ದಿಯೂ ಬಂತು.
ಮದುವೆಯೂ ಆಯ್ತು.
ಮದುವೆ ಮುಗಿಸಿಕೊಂಡು ಬಂದವರು ಕೇವಲ ಒಂದು ವಾರ ಒಟ್ಟೊಟ್ಟಿಗೇ ಕಂಡುಬಂದರು.
ಈಗ ನೋಡಿದರೆ ಅವರಿಬ್ಬರೂ ಬೇರೆ ಬೇರೆ.
ಚಹಾ, ತಿಂಡಿ, ಊಟ ಎಲ್ಲವಕ್ಕೂ ಬೇರೆ ಬೇರೆ.
ಆತ ಸದಾ ಇನ್ನೊಬ್ಬಳ ಜೊತೆಗೆ ಇರುತ್ತಿದ್ದಾನೆ.
ಆಕೆ ಸದಾ ಇನ್ನೊಬ್ಬನ ಜೊತೆಗೆ ಇರುತ್ತಿದ್ದಾಳೆ.
ತನ್ನದಲ್ಲದುದರ ಮೇಲೆ ಆಸೆ.
ತನ್ನದಲ್ಲದುದರ ಮೇಲೆ ಪ್ರೀತಿ.
ಪ್ರೀತಿಸಿದುದನು ತನ್ನದಾಗಿಸಿಕೊಂಬ ಆಸೆ.
ಒಮ್ಮೆ ತನ್ನದಾಗಿಸಿಕೊಂಡಾದ ಮೇಲೆ …?!