ಅದೆಲ್ಲಿಂದ ಬಂದವೋ ಮೋಡಗಳು!

 

(ಚಶ್ಮೆ ಬದ್ಧೂರ್ ಚಿತ್ರದ “ಕಹಾಂ ಸೇ ಬದ್‍ರಾ” ಗೀತೆಯ ಭಾವಾನುವದದ ಯತ್ನ)

ಅದೆಲ್ಲಿಂದ ಬಂದವೋ ಮೋಡಗಳು
ನನ್ನ ಕಣ್ಣ ಕಾಡಿಗೆಯೂ ಕರಗುತಿದೆ

ನನ್ನ ನಿದ್ರೆ ಪ್ರಿಯನೊಂದಿಗೆ ತೆರಳಿದೆ
ಸ್ವಪ್ನಸುಮಗಳೀಗ ಶುಷ್ಕಗೊಂಡಿವೆ
ತುಟಿಗಳ ತನಕ ಬಂದ ಅಮೃತವೂ
ವಿಷವಾಗಿ ಬದಲಾಗಿ ಹೋದಂತಿದೆ
ಅದೆಲ್ಲಿಂದ ಬಂದವೋ ಮೋಡಗಳು
ನನ್ನ ಕಣ್ಣ ಕಾಡಿಗೆಯೂ ಕರಗುತಿದೆ

ಮೋಡಗಳೀ ಹೃದಯವನ್ನಾವರಿಸುತ್ತಿವೆ
ನಿರ್ದಯಿ ಪವನ ಹೆಚ್ಚಿಸುತಿಹನಗ್ನಿ ಜ್ವಾಲೆ
ಈ ಕಣ್ಣುಗಳಿಂದ ಸೋನೆ ಸುರಿಯುತ್ತಲಿದೆ
ಮರುಳು ಮನವಿನ್ನೂ ಅಳುತ್ತಲೇ ಇದೆ
ಅದೆಲ್ಲಿಂದ ಬಂದವೋ ಮೋಡಗಳು
ನನ್ನ ಕಣ್ಣ ಕಾಡಿಗೆಯೂ ಕರಗುತಿದೆ!

Advertisements

ಅದೆಲ್ಲಿಂದ ಬಂದವೋ ಮೋಡಗಳು! ಗೆ 4 ಪ್ರತಿಕ್ರಿಯೆಗಳು

  1. Jayalaxmi Patil ಹೇಳುತ್ತಾರೆ:

    ಸುಪರ್ ಆಸುಜೀ! ಚೆಂದದ ಅನುವಾದ. ಅದೆಷ್ಟೋ ದಿನಗಳ ನಂತರ ನಿಮ್ಮ ಬ್ಲಾಗಿಗೆ ಭೇಟಿ ನೀಡುತ್ತಿರುವೆ. 🙂

  2. Badarinath Palavalli ಹೇಳುತ್ತಾರೆ:

    ಒಳ್ಳೆಯ ಭಾವಾನುವಾದ ಸಾರ್.
    ಇತ್ತೀಚೆಗೆ ನಮ್ಮನ್ನು ಅಗಲಿದ ಮೇರು ನಟ ಫಾರೂಕ್ ಶೇಕ್ ಮತ್ತು ಸುಂದರಿ ದೀಪ್ತಿಯವರ ಜೋಡಿಯ ಈ ಚಿತ್ರ ನನಗೂ ಇಷ್ಟ.
    ಈ ಚಿತ್ರಕ್ಕೆ ವೀರೇಂದ್ರ ಸಹಾನಿಯವರ ಛಾಯಾಗ್ರಹಣವಿತ್ತು.

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: