ತುಂಬಾ ಆತ್ಮೀಯರು ನಮಗೆ ಕಿರಿಕಿರಿ ಉಂಟುಮಾಡಲು, ಮನಸ್ಸಿಗೆ ಬೇಸರ ಉಂಟುಮಾಡಲು ಆರಂಭಿಸಿದರೆ, ಅದನ್ನು ಅವರಲ್ಲಿ ಹೇಳಿಕೊಳ್ಳಲೂ ಕಷ್ಟವಾಗುತ್ತದೆ.
ಇದಕ್ಕೆ ಕಾರಣ ನಮ್ಮ ಅಹಂ, ಸ್ವಾಭಿಮಾನ ಇದ್ಯಾವುವೂ ಅಲ್ಲ.
ಹಾಗೆ ಹೇಳಿಕೊಳ್ಳುವಾಗ, ನಾವದೆಷ್ಟೇ ಜಾಗ್ರತೆ ವಹಿಸಿದರೂ, ನಮ್ಮಿಂದ ಅವರ ಮನಸ್ಸಿಗೆ ನೋವುಂಟಾಗಿ, ನಮ್ಮ ನಡುವಿನ ಆತ್ಮೀಯತೆಗೆ ಧಕ್ಕೆ ಉಂಟಾಗಬಹುದೇನೋ ಅನ್ನುವ ಅಂಜಿಕೆ ಅಷ್ಟೇ ಎಂದು ನನ್ನ ಅನಿಸಿಕೆ. ನಾವು ಅವರನ್ನು ಕಳೆದುಕೊಳ್ಳಲು ತಯಾರಾಗಿರುವುದಿಲ್ಲ.
ಇಲ್ಲಿ ಮೂರು ವರ್ಗಗಳಿವೆ:
ಒಂದು:
ಇಂಥವರೊಂದಿಗೆ ಕಟ್ಟುನಿಟ್ಟಾಗಿ ಹೇಳಿಬಿಡಬಹುದು. ಸ್ನೇಹ/ಸಂಬಂಧ ಮುರಿದುಹೋಗಲೂಬಹುದು. ಚಿಂತೆ ಇಲ್ಲ.
ಎರಡು:
ನಾಜೂಕಾಗಿ ಜಾಣತನದಿಂದ ಹೇಳಿಬಿಡಬಹುದು, ಸ್ನೇಹ/ಸಂಬಂಧ ಮುರಿಯದೆಂಬ ನಂಬಿಕೆ ಇರುತ್ತದೆ. ಆದರೆ ಫಲಿತಾಂಶ ಏನೂ ಆಗಬಹುದು. ಸ್ನೇಹ/ಸಂಬಂಧ ಉಳಿಯಬಹುದು ಅಥವಾ ಮುರಿದುಹೋಗಬಹುದು.
ಮೂರು:
ಹೇಳುವುದಕ್ಕೆ ಅಂಜಿಕೆ. ಮುಜುಗರ. ಒಳಗೊಳಗೆ ಸದಾ ನೋವುಂಡರೂ ಹೇಳಲಾಗದು. ಸ್ನೇಹ/ಸಂಬಂಧವನ್ನು ಕಳೆದುಕೊಳ್ಳಲು ಸುತಾರಾಂ ತಯಾರಿಲ್ಲದ ಮನಸ್ಥಿತಿ.
ಸುರೇಶರೇ
ನಿಮ್ಮಎರದನೆಯ ಆಯ್ಕೆ ನನಗೆ ತುಂಬ ಸಮಂಜಸವಾಗಿ ಕಾಣುತ್ತದೆ.
ಮತ್ತೂ ಸಂಬಂದ ಮುರಿದರೆ ಅವರು ಆತ್ಮೀಯರು ಹೇಗಾಗುತ್ತಾರೆ ?
ಕಾರಾಣಾಂತರದಿಂದ ಮುರಿದ ಕೆಲವು ಸಂಬಂಧಗಳೂ ನಮಗೆ ಆತ್ಮೀಯವಾಗಿಯೇ ಉಳಿದಿರುತ್ತವೆ. ಯೋಚಿಸಿ ನೋಡಿ.