ಮಡಿಲಲ್ಲಿ ತಲೆಯಿರಿಸಿ!

(ಹಿಂದೀ ಚಿತ್ರಗೀತೆಯ ಭಾವಾನುವಾದದ ಯತ್ನ)

ನಿನ್ನಯ ಮಡಿಲಲ್ಲಿ ತಲೆಯನ್ನಿರಿಸಿ ರೋದಿಸಿದೆ
ನನ್ನ ನೋವಿನ ಕತೆಯ ಕೇಳಿಸುತ್ತಾ ರೋದಿಸಿದೆ

ಈ ಜೀವನ ನನ್ನಲ್ಲಿ ಬೇಸರ ತುಂಬಿದಾಗಲೆಲ್ಲಾ
ಭಯದಿಂದ ನಿನ್ನ ಸನಿಹವೇ ಬಂದು ನಿಂತೆನಲ್ಲಾ
ತಗ್ಗಿಸಿದ ತಲೆಯ ತಗ್ಗಿಸಿಕೊಂಡೇ ನಾ ರೋದಿಸಿದೆ

ಈ ಸಂಜೆ ಕಣ್ಣೀರಿಳಿಸುತ್ತಾ ಬಳಿ ಬಂದಾಗಲೆಲ್ಲಾ
ಸುತ್ತಲೂ ನೋವಿನ ಛಾಯೆ ಆವರಿಸಾದಗಲೆಲ್ಲಾ
ನೆನಪಿನ ದೀಪವನು ಬೆಳಗಿ ನಾನು ರೋದಿಸಿದೆ

ವಿರಹದ ನೋವನ್ನು ನನ್ನಿಂದ ಸಹಿಸಲಾಗುವುದಿಲ್ಲ
ನಿನ್ನನ್ನು ಅಗಲಿ ನನ್ನಿಂದ ಇನ್ನು ಬಾಳಲಾಗುವುದಿಲ್ಲ
ಒಲವಿನಲ್ಲಿ ಅದೇನನ್ನೆಲ್ಲಾ ಸಹಿಸಿಕೊಂಡು ರೋದಿಸಿದೆ

(ಆಪ್ ಕೇ ಪೆಹಲೂಂ ಮೆ ಆಕರ್ ರೋದಿಯೇ)

2 Responses to ಮಡಿಲಲ್ಲಿ ತಲೆಯಿರಿಸಿ!

  1. Badarinath Palavalli ಹೇಳುತ್ತಾರೆ:

    gam judaee kaa sahaa jaataa nahe
    ವಿರಹದ ನೋವನ್ನು ನನ್ನಿಂದ ಸಹಿಸಲಾಗುವುದಿಲ್ಲ

    ನಮ್ಮೆಲ್ಲ ವಿರಹವೂ ಸಾಂದ್ರಗೊಂಡಂತಿದೆ ಮೇರೆ ಸಾಯಾ ಚಿತ್ರದ ಈ ಗೀತೆ. ತಮ್ಮ ಭಾವಾನುವಾದವೂ ಅತ್ಯುತ್ತಮವಾಗಿದೆ ಸಾರ್.
    ವಿ. ಬಾಬಾಸಾಹೇಬ್ ಈ ಚಿತ್ರದ ಛಾಯಾಗ್ರಾಹಾಕರು.

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: