ಇಂದು ಪೂರ್ವಾಹ್ನ ಶಿವಮೊಗ್ಗದಿಂದ ಒಂದು ಸಾವಿನ ಸುದ್ದಿ ಬಂತು.
ಮೃತರಾದ ಆ ಅಮ್ಮನನ್ನು ನೆನೆಯುತ್ತಾ, ಕಳೆದ ಏಳನೇ ದಿನಾಂಕದಂದು ಬೆಂಗಳೂರಿನಲ್ಲಿ ಅವರೊಂದಿಗಿನ ನನ್ನ ಮೊದಲ ಹಾಗೂ ಕೊನೆಯ ಭೇಟಿಯ ಸಂದರ್ಭದಲ್ಲಿನ ಮಾತುಗಳನ್ನು ಮೆಲುಕುಹಾಕುತ್ತಾ, ನನ್ನ ಮೊಬೈಲಿನಲ್ಲಿ ಮುದ್ರಿಸಿಕೊಂಡಿರುವ ಅವರ ಮಾತುಗಳನ್ನು ಮತ್ತೆ ಮತ್ತೆ ಅಲಿಸುತ್ತಾ, ಮೊದಲ ಅರ್ಧ ದಿನ ಕಳೆದೆ.
ಅಪರಾಹ್ನ ಮತ್ತೊಂದು ಸಾವಿನ ಸುದ್ದಿ ಬಂತು.
ಈಗ ಫೋನು ರಿಂಗಣಿಸಿದರೆ ಭಯ ಆಗುತ್ತಿದೆ.
ಅದ್ಯಾಕೋ ಈಗೀಗ ಸಾವು ಅಂದರೆ ನನಗೆ ಭಯ.
ಹಿಂದೆ ಹೀಗಿರಲಿಲ್ಲ.
ಆದರೆ, ಇತ್ತೀಚೆಗೆ ಈ ಜೀವನವನ್ನು ನಾನು ಪ್ರೀತಿಸಲು ಆರಂಭಿದಾಗಿನಿಂದ ಬಹುಶಃ ಹೀಗಾಗುತ್ತಿದೆ.