“ನಿಮ್ಮ ಪುಸ್ತಕ ಯಾವಾಗ ಬರೋದು?” ಎಂದು ಕೇಳುವ ನನ್ನವರ ಪ್ರಶ್ನೆಗೆ ಉತ್ತರವಲ್ಲದ ಉತ್ತರ!

ನನ್ನೊಳಗಿನ ಅಳುಕು ಒಂದೇ. 

ನಾನು ಹೊರಹಾಕಿರುವ ನನ್ನ ಮನದ ಮಾತುಗಳ ರಾಶಿಜೊಳ್ಳಿನಲ್ಲಿ, ಕಾಳುಗಳನ್ನು ಆರಿಸುವ ಕೆಲಸ ಅಷ್ಟೊಂದು ಸುಲಭ ಸಾಧ್ಯವಲ್ಲ. ಆರಿಸಲು ಕೂತರೆ, ಎರಡು ಬೊಗಸೆ ತುಂಬುವಷ್ಟೂ ಕಾಳುಗಳು ಸಿಗಬಹುದೆಂಬ ನಂಬಿಕೆ ನನ್ನಲ್ಲಿ ಇಲ್ಲ.

ನನ್ನ ಮನದ ಮಾತುಗಳನ್ನು ಹೊರಗೆಡಹುವಾಗ ನನ್ನಲ್ಲಿ ಮನೆಮಾಡಿರುವ ದೃಢತೆ, “ಪುಸ್ತಕ ಮಾಡಿ ಮುದ್ರಿಸಲೇ?” ಅನ್ನುವ ಪ್ರಶ್ನೆ ಬಂದಾಗ ಇರುವುದಿಲ್ಲ. 

ಇದನ್ನು ಕೀಳರಿಮೆ ಅನ್ನಿ. ಏನಾದರೂ ಅನ್ನಿ.

ಇಂಥ ಪ್ರಶ್ನೆ ಕೇಳುತ್ತಿರುವ ನನ್ನವರ ಆದರಕ್ಕೆ, ಅಭಿಮಾನಕ್ಕೆ, ಗೌರವಕ್ಕೆ ನಾನು ಸದಾ ಋಣಿಯಾಗಿದ್ದೇನೆ.

ಮೂವತ್ತಮೂರು ವರುಷಗಳ ಹಿಂದೆ ಮುಂಬಯಿ ಮಹಾನಗರಿಯ ಜನಜಾತ್ರೆಯಲ್ಲಿ ಹೇಳಹೆಸರಿಲ್ಲದೇ ಕಳೆದುಹೋಗಲು ಸಿದ್ಧನಾಗಿದ್ದ ನನ್ನನ್ನು, ಇಂದು ಈ ಸ್ಥಿತಿಗೆ ತಂದು ನಿಲ್ಲಿಸಿದ್ದಾನೆ ಅನ್ನುವುದಕ್ಕಾಗಿ ಆ ಭಗವಂತನಿಗೆ, ನನ್ನಿಂದ ಪ್ರತಿಕ್ಷಣವೂ ಧನ್ಯವಾದಗಳ ಅರ್ಪಣೆಯಾಗುತ್ತಾ ಇರುತ್ತದೆ. ಏಕಾಂತದಲ್ಲಿ ನನ್ನ ಕಣ್ಣುಗಳಿಂದ ಕೃತಜ್ಞತಾಭಾವದೊಂದಿಗೆ ಆನಂದಭಾಷ್ಪ ಹರಿಯುತ್ತಿರುತ್ತದೆ. 

ನನ್ನಿಂದ ಬರೆಸುತ್ತಿರುವವನೂ ಆತನೇ. 

ತಮ್ಮಿಂದ ಓದಿಸುತ್ತಿರುವವನೂ ಆತನೇ. 

ತಮ್ಮೆಲ್ಲರ ಆಶಯಗಳನ್ನು ಕಾರ್ಯರೂಪಕ್ಕೆ ತರಬೇಕಾಗಿರುವವನೂ ಅತನೇ. 

ನಾನು ಇಲ್ಲಿ ನೆಪಮಾತ್ರ. 

ನನ್ನದೇನಿದ್ದರೂ ಆತನ ಹೆಸರಿನ ಜಪಮಾತ್ರ!

Advertisements

“ನಿಮ್ಮ ಪುಸ್ತಕ ಯಾವಾಗ ಬರೋದು?” ಎಂದು ಕೇಳುವ ನನ್ನವರ ಪ್ರಶ್ನೆಗೆ ಉತ್ತರವಲ್ಲದ ಉತ್ತರ! ಗೆ ಒಂದು ಪ್ರತಿಕ್ರಿಯೆ

  1. Nanaiah DC ಹೇಳುತ್ತಾರೆ:

    ನಿಮ್ಮ ಮತ್ತು ಮಿಮ್ಮ ಓದುಗರ ಸದಾಶೆ ಬೇಗ ನೆರವೇರಲಿ ಎಂದು ಆ ಭಗವಂತನಲ್ಲಿ
    ಪ್ರಾರ್ಥನೆ. ಶುಭವಾಗಲಿ.

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: