ನಿತ್ಯ ನಿರಂತರ ಮೋಸ!

ಕೋಣೆಯೊಳಗೆ ಅವರು ಓರ್ವರೇ ಕೂತಿದ್ದಾರೆ. ಈತ ಒಳಗೆ ಪ್ರವೇಶಿಸುತ್ತಾನೆ.

“ಸ್ವಾಮೀ, ನನ್ನನ್ನು ಬರಹೇಳಿದಿರಿ ಅಂತೆ. ಯಾಕೆ ಅಂತ ಗೊತ್ತಾಗಲಿಲ್ಲ”

“ಬಾ… ಕೂತುಕೋ… ತಗೋ, ಈ ಲಕೋಟೆಯಲ್ಲಿ ದೇವರ ಪ್ರಸಾದ ಇದೆ. ಸ್ವೀಕರಿಸು, ಇಲ್ಲ ಅನ್ನಬೇಡ. ನಿರಾಕರಿಸಬೇಡ. ದೇವರು ಮುನಿದಾನು, ನಿನ್ನ ಕುಟುಂಬ ನಾಶವಾದೀತು. ಎರಡು ಮಾತಿಲ್ಲದೇ ಸ್ವೀಕರಿಸು. ಅದರಲ್ಲಿ ಎಂಟೂವರೆ ಲಕ್ಷ ರೂಪಾಯಿಗಳಿವೆ. ನಿನ್ನ ಮನೆಯ ಹಿಂಭಾಗದ, ರಸ್ತೆ ಬದಿಯ ಹತ್ತೂವರೆ ಎಕ್ರೆ ಜಾಗವನ್ನು ನಮ್ಮೆಲ್ಲರ ಈ ದೇವರಿಗೆ ಬಿಟ್ಟುಕೊಡು… “

“ಸ್ವಾಮೀ… ತಾವು ದೊಡ್ಡವರು… ತಾವೂ ಹೀಗೆ ನಮಗೆ… ಮೋಸ…”

“ನೋಡು… ಹೆಚ್ಚಿಗೆ ಮಾತಾಡುವ ಅಗತ್ಯ ಇಲ್ಲ. ದೇವರಿಗೆ ಕೋಪ ಬಂದರೆ ಏನಾಗಬಹುದು ಎನ್ನುವ ಅರಿವು ನಿನಗೂ ಇದೆ. ಅದನ್ನು ನಾನು ಬಿಡಿಸಿ ಹೇಳಬೇಕಾಗಿಲ್ಲ… ಇನ್ನು ಹೊರಡು”

ಆತ ಆ ಕೋಣೆಯಿಂದ ಹೊರ ಬರುತ್ತಿದ್ದಂತೆಯೇ, ನಾಲ್ಕು ಮಂದಿ ಘಟಾನುಘಟಿಗಳು, ಆಗಲೇ ಸಿದ್ಧವಾಗಿರಿಸಿರುವ ನೋಂದಣಿಪತ್ರಗಳನ್ನು, ಈ ಅಮಾಯಕನ ಮುಂದಿಟ್ಟು, ಆತನ ಸಹಿಗಳನ್ನು ಪಡೆಯುತ್ತಾರೆ.

ಅಲ್ಲಿಗೆ ಇನ್ನೊಂದು ಕುಟುಂಬದ ಆಸ್ತಿ ಆ “ದೇವರ” ಪಾಲಾಗುತ್ತದೆ.

ಇದು ನಿತ್ಯ, ನಿರಂತರ!

Advertisements

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: