ಜಾಣ್ಮೆಯಲ್ಲಿದೆ ಜೀವನ!

ಸಖೀ,
ನನ್ನ ಬಗ್ಗೆ ಸದಾ ನಿನ್ನೊಳಗೆ ಏಕೆ
ಹೇಳು ಈ ತರಹದ ಅನುಮಾನ,
ನಾನು ಸದಾ ನಿನ್ನನ್ನು ತಪ್ಪಾಗಿ
ತಿಳಿಯುತ್ತೇನೆಂಬೀ ಅನುಮಾನ,
ಎಲ್ಲಾ ತಿಳಿದರೂ ತಿಳಿಯದಂತೆ
ಇರುವುದು ನನ್ನ ಜಾಯಮಾನ,
ಅರಿವಿಗೆ ಬಂದದೆಲ್ಲವ ಅರುಹದೇ
ಇರುವ ಜಾಣ್ಮೆಯಲ್ಲಿದೆ ಜೀವನ!

ತಮ್ಮ ಪ್ರತಿಕ್ರಿಯೆ ನೀಡಿ.