ಆದರೂ…!

 

ಸಖೀ,
ನಿನ್ನ ಮಾತುಗಳಿಗೆ ಅರ್ಥಕೊಡಲು ವಿಫಲನಾದಾಗ
ನಿನ್ನ ಮೌನವನ್ನೂ ನಾನು ಅರ್ಥಮಾಡಿಕೊಂಡಾಗ
ನಾನು ಒಳಗೊಳಗೇ ಅಳುತ್ತೇನೆ;

ನಿನ್ನ ಮೌನಕ್ಕೆ ಅರ್ಥ ಕೊಡಲು ನಾ ವಿಫಲನಾದಾಗ
ನಿನ್ನ ಮಾತುಗಳು ನನಗೆ ಅರ್ಥವಾಗಿ ನೋವಾದಾಗ
ನಾನು ಒಳಗೊಳಗೇ ಅಳುತ್ತೇನೆ;

ನಿನ್ನ ನಗುಮೊಗದ ಹಿಂದಿರುವ ನೋವಿನ ಅರಿವಾದಾಗ
ವಿಷಾದ ನಿನ್ನ ಯತ್ನಕ್ಕೂ ಮೀರಿ ಮೊಗವನ್ನು ಕವಿದಾಗ
ನಾನು ಒಳಗೊಳಗೇ ಅಳುತ್ತೇನೆ;

ಆದರೂ ಅರ್ಥತುಂಬಿದ ನಿನ್ನೊಲವಿನ ಮಾತುಗಳಿಗಾಗಿ
ನಗುವಾಗ ಪ್ರಕಾಶಿಸುವ ನಿನ್ನ ಮುಖದ ದರ್ಶನಕ್ಕಾಗಿ
ನಾನು ಸದಾ ಕಾಯುತ್ತಿರುತ್ತೇನೆ;

ನನ್ನ ಮಾತುಗಳ ನೀನಾಲಿಸುವಾಗ, ದೇಹವೇ ಕಿವಿಯಾಗಿ
ಮುಖಭಾವದಲ್ಲೇ ಹೊರಹೊಮ್ಮುವ ಒಲವ ಸ್ಪಂದನಕ್ಕಾಗಿ
ನಾನು ಸದಾ ಕಾಯುತ್ತಿರುತ್ತೇನೆ!

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: