ಅನುಭವ!

ಅನುಭವ ಎಲ್ಲರಲ್ಲೂ ಇದೆ.

ನಮ್ಮಲ್ಲಿ ಇರದ, ನಮ್ಮ ಉಪಯೋಗಕ್ಕೆ ಬರಬಹುದಾದ ಅನುಭವವೂ ಹಲವರಲ್ಲಿದೆ.

ಆದರೆ ಆ ಅನುಭವವನ್ನು ಒಪ್ಪಿ, ಆಲಿಸಿ, ಸ್ವೀಕರಿಸುವ ಮನೋಭಾವವನ್ನು ನಾವು ಆ ಎಲ್ಲರ ಮುಂದೆಯೂ ತೋರಿಸಿಕೊಳ್ಳುವುದಿಲ್ಲ.

ಯಾರನ್ನು ನಾವು ತೀರ ನಮ್ಮ ಮಟ್ಟದಲ್ಲಿ ನೋಡುತ್ತಿರುತ್ತೇವೆಯೋ, ಅವರ ಮುಂದೆ ನಾವು ಸ್ವೀಕರಿಸುವ ಮನೋಭಾವದೊಂದಿಗೆ ತೆರೆದುಕೊಳ್ಳುವುದಿಲ್ಲ.

ಅವರ ಅನುಭವೋಕ್ತಿಗಳೂ ಅಮೂಲ್ಯವಾಗಿದ್ದರೂ, ನಮ್ಮ ಮನಸ್ಸು ಅವುಗಳನ್ನು ಒಪ್ಪಿಕೊಳ್ಳಲು ತಯಾರಾಗಿ ಇರುವುದಿಲ್ಲ ಹಾಗೂ ಅವುಗಳನ್ನು …ಆಲಿಸಲು ನಮ್ಮ ಕಿವಿಗಳು ಒಪ್ಪಿಕೊಳ್ಳುವುದಿಲ್ಲ.

ನಾವು ಯಾರ ಮುಂದೆ ಅಳುಕಿಲ್ಲದೇ, ತೆರೆದುಕೊಳ್ಳುತ್ತೇವೆಯೋ ಅವರು ನಮಗಿಂತ ತುಂಬಾ ಎತ್ತರದಲ್ಲಿದ್ದಂತೆ ಭಾಸವಾಗುತ್ತಾರೆ. ಅವರ ಅನುಭಯೋಕ್ತಿಗಳಿಂದಾಗಿ, ನಮ್ಮ ದೃಷ್ಟಿಯಲ್ಲಿ ಅವರು ಇನ್ನೂ ಎತ್ತರಕ್ಕೆ ಬೆಳೆಯಲು ತೊಡಗುತ್ತಾರೆ.

ಅಥವಾ ಯಾರನ್ನು ನಾವು ನಮಗಿಂತ ಬಹಳ ಎತ್ತರದಲ್ಲಿ ಇಟ್ಟು ನೋಡುತ್ತೇವೆಯೋ ಅವರ ಮುಂದೆ ನಾವು ಸಲೀಸಾಗಿ ತೆರೆದುಕೊಳ್ಳುತ್ತೇವೆ. ಆಲಿಸಲು ತಯಾರಾಗಿರುತ್ತೇವೆ.

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: