ನಾನೂ ಕವಿಯಾಗಲಿರುವೆ – ಬನ್ನಿ ಸಾಕ್ಷಿಯಾಗಿ!

100
 
 
ನಾ ಗೀಚಿದ್ದು ಸಾವಿರದ ಗಡಿ ದಾಟಿಯಾದಾಗ
ನನಗೂ ಅರ್ಹತಾಪತ್ರ ದೊರೆಯುತಿಹುದೀಗ

ಅಲ್ಲಿರುವ ನೂರರಲ್ಲಿ ನಾನೂ ಓರ್ವನಾಗಿರುವೆ
ಔಪಚಾರಿಕವಾಗಿ ನಾನೂ “ಕವಿ”ಯಾಗಲಿರುವೆ

ಮುದ್ರಿತವಾಗುತಿಹುದೀಗೆನ್ನ ಎರಡನೆಯ ಕವನ
೩೫ ವರುಷಗಳ ಹಿಂದೆ ಆಗಿತ್ತು ಮೊದಲ ಕವನ

ಎಲ್ಲಾ ಆಗುಹೋಗುಗಳೂ ಆ ವಿಧಿಯ ಹಿಡಿತದಲ್ಲಿ
ನನ್ನದೇನು ನಾನು ನೆಪಮಾತ್ರ ಆತನ ಆಟದಲ್ಲಿ

ನನಗಿದು “ಕವಿ” ಪದವಿ ಪ್ರದಾನ ಸಮಾರಂಭದಂತೆ
ಬನ್ನಿ, ಸಾಕ್ಷಿಯಾಗಿ ಮುಂದಾರೂ ಅಲ್ಲಗಳೆಯದಂತೆ!

ಚಿತ್ರಕೃಪೆ: ರೂಪಾ ಸತೀಶ್

8 Responses to ನಾನೂ ಕವಿಯಾಗಲಿರುವೆ – ಬನ್ನಿ ಸಾಕ್ಷಿಯಾಗಿ!

 1. Pradeep ಹೇಳುತ್ತಾರೆ:

  ಚೆಂದದ ಕವನ ಸಾರ್… ನಿಮ್ಮಂಥ ಹಿರಿಯ ಕವಿಗಳು 3K ಜೊತೆ ಕೈ ಗೂಡಿಸಿದ್ದು ಬಹಳ ಸಂತಸವಾಯಿತು!

 2. parthasarathyn ಹೇಳುತ್ತಾರೆ:

  ಕವಿಗಳಲ್ಲಿ ನೂರರಲ್ಲಿ ಒಬ್ಬರಾಗಿ ಹಾಗೆ ಸಾಧನೆ ೧೦೦೦ ಕವಿಗಳನ್ನು ಮೀರಿಸಿ ಸಹಸ್ರರಥರಾಗಿ ಎಂದು ಹಾರೈಸುವೆ

 3. Naveen Krhalli ಹೇಳುತ್ತಾರೆ:

  3K tandadinda nimage hutpurvaka dhanyavaadagalu haagu abhinandanegalu Sir. Banni ee samarambhavannu yellaru seeri vijrummbane inda acharisona…. 🙂

 4. ಬದರಿನಾಥ ಪಳವಳ್ಳಿಯ ಕವನಗಳು ಹೇಳುತ್ತಾರೆ:

  ಆಸುಮನ ಅವರ ಕವನದ ಜೊತೆಗೆ ಈ ಅಜ್ಞಾತ ಕವಿಯ ಕವನವೂ ಶತಮಾನಂಭವತಿಯಲ್ಲಿ ಬೆಳಕು ಕಾಣುತ್ತಿರುವುದು ನನಗೆ ಗೌರವದ ವಿಚಾರ. 1000 ರಚನೆಗಳು ತಮಾಷೆ ಮಾತಲ್ಲ. ನಾನಿನ್ನೂ ದೇಕುತ್ತಲೇ ಇದ್ದೇನೆ!
  3k ಗುಂಪಿಗೆ ನನ್ನ ಆನಂತ ನಮನ.

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: