ಸಖೀ,
ಕವಿತೆಗಳೆಂದರೆ ಅವು
ನಿನ್ನ ದನಿಯೂ ಅಲ್ಲ,
ನನ್ನ ದನಿಯೂ ಅಲ್ಲ
ನಮ್ಮ ಅತರಂಗದ
ಭಾವಾನುಭವದಿಂದ
ಹೊರ ಹೊಮ್ಮುತಿಹ
ನಮ್ಮ ದನಿಗಳು;
ನೀನು ನೀನೇ ಅಲ್ಲ
ನಾನು ನಾನೇ ಅಲ್ಲ,
ನಾವಿಬ್ಬರೂ ಒಂದೇ
ಎಂಬಾಗ ಸಂಯುಕ್ತ
ಭಾವಾಭಿವ್ಯಕ್ತಿಯ
ನಿಜ ನಿದರ್ಶನಗಳು!
ನಿದರ್ಶನಗಳು!
26 ಜನ 13ಅನಿವಾರ್ಯತೆ!
26 ಜನ 13ಸಖೀ,
ಅಂದು ಏಕೆ ತಿರಸ್ಕರಿಸಿದೆ ಎಂಬ ನಿನ್ನ
ಪ್ರಶ್ನೆ ಏಕೆ ಕಾಡುತಿಹುದೀ ಪರಿ ನನ್ನ?
ಅದು ಅಂದಿನ ನಮ್ಮ ಅನಿವಾರ್ಯತೆ
ಹಾಗಾಗಿ ಇಂದು ಇಲ್ಲಿದೆ ಈ ನೀರವತೆ
ತಪ್ಪು ನಿನ್ನದೂ ಅಲ್ಲ, ನನ್ನದೂ ಅಲ್ಲ
ಅಲ್ಲಿ ನಾವು ನಾವಾಗಿ ಇದ್ದಿರಲೇ ಇಲ್ಲ
ಇಂದು ನಾವು ನಾವಾಗಿರುವಾಗಲಷ್ಟೇ
ಧೈರ್ಯದಿಂದ ಪ್ರಶ್ನೆ ಕೇಳಬಹುದಷ್ಟೇ?
ಹಿರಿಯರು ಬೇಕು!
26 ಜನ 13ಸಖೀ,
ನಿನಗೂ, ನಿನ್ನಂತಹ
ಅನ್ಯರಿಗೂ ನಾನಿಲ್ಲಿ
ಹಿರಿಯನಾಗಿ ಇದ್ದು
ನನಗೀಗ ನಿಜವಾಗಿ
ಆಗುತ್ತಿದೆ ಬೇಜಾರು;
ಬೇಕೆನಿಸುತಿದೆ ಈಗ
ನಾನು ಗೌರವದಿಂದ
ತಲೆಯೆತ್ತಿ ನೋಡುವ
ನನ್ನನ್ನೂ ಗದರುತ್ತಾ
ತಿದ್ದುವ ಹಿರಿಯರು!
ಇರದಂದು!
26 ಜನ 13ಸಖೀ,
ಇರಲಿ ಇಂತೆಯೇ ದಿನ
ಪ್ರತಿದಿನ ನಿನ್ನ – ನನ್ನ
ನಡುವಣ ಈ ಮಧುರ
ಸಂಭಾಷಣೆಯ ಆನಂದ
ಸಂಭಾಷಣೆ ಇರದಂದು
ಇದರ ಮೆಲುಕೇ ಸದಾ
ನೀಡುತ್ತಲಿರಲಿ ನಮಗೆ
ಸುಖಾನುಭವದಾನಂದ!
ಮನಸ್ಸುಗಳಿಗೆ ಮಾತ್ರ !
26 ಜನ 13ಸಖೀ,
ಸಮಯದ ಹಾದಿಯಲ್ಲಿ
ಹಿಂದೆ ಸಾಗುವ ಶಕ್ತಿ
ಇರುವುದು ನಮ್ಮ ನಮ್ಮ
ಮನಸ್ಸುಗಳಿಗೆ ಮಾತ್ರ;
ಅವು ಹೀಗೆ ಸಾಗಿ ಹಾಗೆ
ಮರಳುತ್ತಾ ಇರುತ್ತವೆ,
ಈ ದುಃಖ ನೆನಪುಗಳೆಲ್ಲಾ
ಕೆಲವು ಕ್ಷಣಗಳು ಮಾತ್ರ;
ಸತತ ದುಃಖ ಆಗುವುದು
ನೆನಪುಗಳು ಸಮಯದ
ಜೊತೆ ಜೊತೆಗೆ ನಮ್ಮನ್ನು
ಅನುಸರಿಸಿದರೆ ಮಾತ್ರ!
ಗೋಡೆಗಳಿಗೆ!
25 ಜನ 13ಸಂಜೆಯಾದ
ಕೂಡಲೇ
ಹೇಗೆ ಹಕ್ಕಿಗಳು
ಮರಳುತ್ತವೆಯೋ
ತಮ್ಮ ತಮ್ಮ
ಗೂಡುಗಳಿಗೆ,
ಹಾಗೆಯೇ,
ಸಂಜೆಯಾದ
ಕೂಡಲೇ ನಾವು
ಮರಳುತ್ತೇವೆ
ಅಂತರ್ಜಾಲದ
ನಮ್ಮ ನಮ್ಮ
ಗೋಡೆಗಳಿಗೆ!
ಅನುಸರಿಸಿದರೆ ಮಾತ್ರ!
25 ಜನ 13ಸಮಯದ ಹಾದಿಯಲ್ಲಿ
ಹಿಂದೆ ಸಾಗುವ ಶಕ್ತಿ
ಇರುವುದು ನಮ್ಮ ನಮ್ಮ
ಮನಸ್ಸುಗಳಿಗೆ ಮಾತ್ರ;
ಅವು ಹೀಗೆ ಸಾಗಿ ಹಾಗೆ
ಮರಳುತ್ತಾ ಇರುತ್ತವೆ,
ಈ ದುಃಖ ನೆನಪುಗಳೆಲ್ಲಾ
ಕೆಲವು ಕ್ಷಣಗಳು ಮಾತ್ರ;
ಸತತ ದುಃಖ ಆಗುವುದು
ನೆನಪುಗಳು ಸಮಯದ
ಜೊತೆ ಜೊತೆಗೆ ನಮ್ಮನ್ನು
ಅನುಸರಿಸಿದರೆ ಮಾತ್ರ!
ಹೊಗೆ ಬಿಡದಿದ್ದರೆ!
23 ಜನ 13ಸಖೀ,
ಬಿಡುವುದಾದಲ್ಲಿ
ಬಿಡಬೇಕು ಹೊಗೆ
ಹಾಕಿಸಿಕೊಳ್ಳುವ
ಮೊದಲೇ ಹೊಗೆ
ಬಿಡುವುದನ್ನು;
ಏಕೆಂದರೆ ಹಗೆ
ತೀರಿಸಿಕೊಳ್ಳದೇ,
ಹೊಗೆ ಹಾಕಿಸದೇ
ಬಿಡದದು, ತನ್ನನ್ನು
ಸುಟ್ಟವರನ್ನು!
*******
ಇನ್ನು ಬಾಳೋದು ಹೇಗೊಂಟಿಯಾಗಿ?
23 ಜನ 13೧೯೭೦ ರ ದಶಕದಲ್ಲಿ ಬಿಡುಗಡೆಯಾಗಿದ್ದ ತುಳುಚಿತ್ರವೊಂದರ ಗೀತೆಯ ರಾಗ ಇಂದು ನನ್ನನ್ನು ದಾರಿಯುದ್ದಕ್ಕೂ ಕಾಡುತ್ತಿತ್ತು.
ಆ ಧಾಟಿಯಲ್ಲಿ ಒಂದು ಗೀತೆ ಬರೆಯುವ ನನ್ನ ಯತ್ನ ಇಲ್ಲಿದೆ.
ಆ ತುಳು ಗೀತೆಯ ಸಾಲು ಹೀಗಿದೆ “ದಾನೇ ಪನ್ ಲೇ ಇರೆನಾ ಮನಸೆಂಕ್ ತೆರಿಯಂದೇ ಪೋವಾ?”
ಈಗ ನನ್ನ ಗೀತೆ:
||ನೀನೇ ಹೇಳು
ಇನ್ನು ಬಾಳೋದು ನಾನೊಂಟಿಯಾಗಿ
ಇನ್ನು ಬಾಳೋದು ಹೇಗೊಂಟಿಯಾಗಿ||
ಬರಿದಾಯ್ತು ಮನಸು
ಮುರಿದೋಯ್ತು ಕನಸು
ಬಾಳಲ್ಲಿ ನನಗೇನೂ ತೋಚದು
ಯಾರೋ ಆಡಿದ
ಮಾತನು ಕೇಳಿ ನೀ
ಯಾರೋ ಆಡಿದ
ಮಾತನು ಕೇಳಿ ನೀ
ದೂರಾದೆ ನನ್ನಿಂದ ಯಾಕೆ?
||ನೀನೇ ಹೇಳು
ಇನ್ನು ಬಾಳೋದು ನಾನೊಂಟಿಯಾಗಿ
ಇನ್ನು ಬಾಳೋದು ಹೇಗೊಂಟಿಯಾಗಿ||
ಬಾಳಲ್ಲಿ ಬಂದೆ
ಹೊಂಗನಸ ತಂದೆ
ನನ್ನಲ್ಲಿ ಹೊಸಜೀವ ತುಂಬಿದೆ
ಹೀಗೆ ಒಮ್ಮೆಗೇ
ನಡು ನೀರಲ್ಲಿ ನೀ
ಹೀಗೆ ಒಮ್ಮೆಗೇ
ನಡು ನೀರಲ್ಲಿ ನೀ
ಬಿಟ್ಯಾಕೆ ದೂರಾದೆ ಹೇಳು
||ನೀನೇ ಹೇಳು
ಇನ್ನು ಬಾಳೋದು ನಾನೊಂಟಿಯಾಗಿ
ಇನ್ನು ಬಾಳೋದು ಹೇಗೊಂಟಿಯಾಗಿ||
ಹಳಿ ತಪ್ಪಿದರೆ!
23 ಜನ 13ಕೆಲವು ದಿನಗಳೇ ಹೀಗೆ
ನಿಜವಾಗಿ ಕೆಲವು ದಿನಗಳೇ ಹಾಗೆ
ನಮ್ಮ ಮಾತುಗಳೂ
ಹಳಿತಪ್ಪಿದ ಗಾಡಿಯ ಹಾಗೆ
ಎಲ್ಲೋ ಹೊರಟವು
ಇನ್ನೇಲ್ಲೋ ಸೇರುವ ಹಾಗೆ
ಮೌನಕ್ಕೂ ಬೆಲೆಯಿಲ್ಲದ ಹಾಗೆ
ಮೌನ ಸೋತಾಗ
ಮಾತಿಗೂ ಬೆಲೆಯಿಲ್ಲದ ಹಾಗೆ!