ಈ ಸ್ಥಿತಿಗೆ ನಾವೂ ಜವಾಬ್ದಾರರು!

ಅತ್ಯಾಚಾರ ನಡೆದಿರುವುದು,  ಒಂದು ಹೆಣ್ಣುಮಗಳ ಮೇಲಲ್ಲ,  ಅತ್ಯಾಚಾರ ನಡೆದಿರುವುದು ಈ ಸಮಾಜದ ಮೇಲೆ. ಇಲ್ಲಿ ಬಲಿಯಾಗಿರುವುದೂ ಸಮಾಜವೇ, ಅಪರಾಧಿ ಸ್ಥಾನದಲ್ಲಿ ನಿಂತಿರುವುದೂ ಸಮಾಜವೇ.

ಕಳೆದ ನಾಲ್ಕೈದು ದಶಕಗಳಿಂದೀಚೆಗೆ ನಮ್ಮ ನಾಡಿನ ಚಿತ್ರರಂಗದವರು ಹಾಗೂ ಮಾಧ್ಯಮದವರು ಮಹಿಳೆಯರನ್ನು ಬಳಸಿಕೊಂಡ ಪರಿಯೇ ಒಂದು ರೀತಿಯಲ್ಲಿ ಸತತ ಅತ್ಯಾಚಾರ ನಡೆಸುತಿರುವಂತಿತ್ತು ಹಾಗೂ ಇನ್ನೂ ಇದೆ. ನೃತ್ಯಗಳು, ಸಿನಿಮಾಗಳಲ್ಲಿ ಜಾಸ್ತಿಯಾಗುತ್ತಾ ಬಂದಂತೆ, ಕಲಾವಿದೆಯರು ತೊಡುವ ಬಟ್ಟೆಗಳು ಕಡಿಮೆಯಾಗುತ್ತಾ ಬಂದವು. ಅವುಗಳನ್ನು ಚಿತ್ರಮಂದಿರದ ಪರದೆಯ ಮೇಲಷ್ಟೇ ನೋಡುತ್ತಿದ್ದ ಕಾಲವೊಂದಿತ್ತು. ಆದರೆ ಕಳೆದ ಎರಡು – ಎರಡೂವರೆ ದಶಕಗಳಿಂದೀಚೆಗೆ ಯಾವುದೇ ನಿರ್ಬಂಧವಿಲ್ಲವೇ, ಆ ನಗ್ನ ಚಿತ್ರಗಳು ಸುದ್ದಿಮಾಧ್ಯಮಗಳಲ್ಲೂ ಪ್ರಕಟಗೊಳ್ಳತೊಡಗಿದವು. ಮನೆಮನೆಗೂ “ಟಿವಿ”ಗಳು ಬಂದವು. ಅವುಗಳ ಜೊತೆಗೆ, ಗಂಡು ಹೆಣ್ಣುಗಳೆನ್ನುವ ಭೇದ ಇಲ್ಲದೆಯೇ  ನಿರ್ಲಜ್ಜೆಯಿಂದ ಮೈಮಾಟಗಳನ್ನು ಪ್ರದರ್ಶಿಸುವ ಎಲ್ಲರ ಚಿತ್ರಗಳೂ, ದೃಶ್ಯಗಳೂ ಮನೆಮನೆಗಳಿಗೆ ಬಂದವು. ನಾಚಿಕೆ, ಮಾನ ಮರ್ಯಾದೆ ಎನ್ನುವುದು ಎಲ್ಲೆಂದರಲ್ಲಿ ಮೂರಾಬಟ್ಟೆಯಾಗತೊಡಗಿದವು. ಇವುಗಳಿಗೆಲ್ಲಾ ಅನ್ಯರಷ್ಟೇ ನಾವೂ ಜವಾಬ್ದಾರರು. ಜಾಸ್ತಿ ಅಂಗ ಪ್ರದರ್ಶನಮಾಡಿದವರು ವಿಶ್ವ, ಭುವನ ಸುಂದರಿಗಳೆಂಬ ಪ್ರಶಸ್ತಿಗಳಿಗೆ ಭಾಜನರಾದರು. ಮುಂದೆ ಅವರೇ ಚಲನಚಿತ್ರಗಳಲ್ಲಿ ಬೇಕಾಬಿಟ್ಟಿ ನೃತ್ಯಗಳಿಗೆ, ಕಾಮೋತ್ತೇಜಕ ದೃಶ್ಯಗಳಿಗೆ ತಮ್ಮ ಅಂಗಾಂಗಗಳ ಕೊಡುಗೆ ನೀಡತೊಡಗಿದರು. ಉಳಿದ ಕಲಾವಿದರಿಗೆ ತಮ್ಮ ಅಳಿವು ಉಳಿವಿನ ಪ್ರಶ್ನೆ ಎದುರಾಯಿತು. ಹಾಗಾಗಿ ಅನ್ಯರೂ ನಿರ್ಲಜ್ಜರಾದರು.

ಹೀಗಿರುವಾಗ,  ಮದ್ಯಪಾನದ ಹಾಗೂ ತಂಬಾಕಿನ ಉತ್ಪನ್ನಗಳ ಮಾರುಕಟ್ಟೆ ಈ ದೇಶದ ಆರ್ಥಿಕ ಸ್ಥಿಯನ್ನು ನಿರ್ಧರಿಸುವಷ್ಟರ ಮಟ್ಟಿಗೆ ಬೆಳೆಯತೊಡಗಿತು. ದುಶ್ಚಟಗಳಿಗೆ ಬಲಿಯಾದವರು ಹಾಗೂ ವ್ಯಸನಿಗಳಾದವರು, ಇಂತಹ ಕಾಮೋತ್ತೇಜಕ ಚಲನಚಿತ್ರಗಳನ್ನು ವೀಕ್ಷಿಸಿದ ನಂತರ ತಮ್ಮ ತೀಟೆ ತೀರಿಸಿಕೊಳ್ಳಲು ಬೇಟೆಯನ್ನು ಅರಸುವಾಗ, ಅನಾಯಾಸವಾಗಿ ದಕ್ಕುವ, ನಿಸ್ಸಹಾಯಕ ಹೆಣ್ಣುಮಕ್ಕಳು ಇವರಿಗೆ ಬಲಿಯಾಗತೊಡಗಿದರು. ಒಂದು ಘಟನೆ ಇನ್ನೊಂದು ಘಟನೆಗೆ, ಒಂದು ಅಪರಾಧ ಇನ್ನೊಂದು ಅಪರಾಧಕ್ಕೆ ಸ್ಪೂರ್ತಿ ನೀಡುತ್ತಾ ಬಂದಿತು. ಏಕೆಂದರೆ, ಅಪರಾಧಿಗಳು ಕಠಿಣ ಶಿಕ್ಷೆಗೆ ಒಳಗಾಗುವುದಿಲ್ಲ. ಒಂದು ವೇಳೆ ಅಂಥ ಶಿಕ್ಷೆಗೆ ಒಳಗಾದರೂ, ಆ ಸುದ್ದಿಗಳು ಮಾಧ್ಯಮಗಳಲ್ಲಿ ಪ್ರಾಮುಖ್ಯ ಪಡೆಯುವುದೇ ಇಲ್ಲ.

ಈ ಸಮಾಜ, ಲಿಂಗ ಭೇದ ಮರೆತು ತನ್ನ ಒಳಗಣ್ಣನ್ನು ತೆರೆದುಕೊಳ್ಳಬೇಕಿದೆ. ತಡವಾಗಿಯಾದರೂ, ಇಂತಹ ಅಪರಾಧಗಳ ನಿಯಂತ್ರಣೆಗಾಗಿ ತಾನೇ ಒಂದು ವ್ಯವಸ್ಥೆಯನ್ನು ಜಾರಿಗೆ ತರಬೇಕಾಗಿದೆ. ಇದರಲ್ಲಿ ಈ ಸಮಾಜದ  ಪ್ರತಿಯೊಬ್ಬ ಸದಸ್ಯನ ಜವಾಬ್ದಾರಿ ಮುಖ್ಯವಾಗಿರುವಂತೆಯೇ, ಮುದ್ರಣ ಹಾಗೂ ದೃಶ್ಯಮಾಧ್ಯಮಗಳ ಜವಾಬ್ದಾರಿಯೂ ಬಹು ಮುಖ್ಯವಾಗಿದೆ.

4 Responses to ಈ ಸ್ಥಿತಿಗೆ ನಾವೂ ಜವಾಬ್ದಾರರು!

  1. chitraprasca ಹೇಳುತ್ತಾರೆ:

    ಸುರೇಶ್,
    ಒಂದು ಒಳ್ಳೆಯ ಬರಹ.

  2. PARTHASARATHY N ಹೇಳುತ್ತಾರೆ:

    ಒಂದು ಘಟನೆ ಇನ್ನೊಂದು ಘಟನೆಗೆ, ಒಂದು ಅಪರಾಧ ಇನ್ನೊಂದು ಅಪರಾಧಕ್ಕೆ ಸ್ಪೂರ್ತಿ ನೀಡುತ್ತಾ ಬಂದಿತು…..
    ನಿಜ ಅದಕ್ಕೆ ಕಾರಣ ಮಾಧ್ಯಮಗಳು, ಹಾಗು ಸಿನಿಮಾ ಮಂದಿ ಅಪರಾದವನ್ನು ವೈಭವಿಕರೀಸುತ್ತ ಸಾಗಿದ್ದು, ಮತ್ತು ಸರ್ಕಾರ ಇಲ್ಲಿ ತನಗೆ ಯಾವುದೆ ಸಂಭಂದವಿಲ್ಲ ಎನ್ನುವಂತೆ ಮೌನವಾಗಿರುವುದು !

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: