ನಮಗೆ ಮತ್ತಿನ್ನೇನು ಬೇಕು?

ಪ್ರತಿಯೊಬ್ಬ ಓದುಗರೂ ವಿಮರ್ಶಕರು ಹೇಗಾಗುವರು
ಸಾವಿರಾರು ಓದುಗರಲ್ಲಿಹರು ಒಂದಿಬ್ಬರೇ ವಿಮರ್ಶಕರು

ಬರಹಗಾರರೆಲ್ಲರೂ ಇಲ್ಲಿ ವಿಮರ್ಶಕರೇ ಎಂದೇನೂ ಅಲ್ಲ
ಪ್ರತಿಕ್ರಿಯೆಗಳು ವಿಮರ್ಶೆಯೂ ಆಗಿರಬೇಕೆಂದೇನೂ ಇಲ್ಲ

ಪ್ರಕಟವಾದ ಒಂದು ಪುಸ್ತಕಕ್ಕೆಷ್ಟು ಬರುತ್ತವೆ ವಿಮರ್ಶೆಗಳು
ಆದರೂ ಎಲ್ಲಿ ಕಡಿಮೆ ಆಗಿದ್ದಾರೆ ಹೇಳಿ ಓದುಗ ಬಂಧುಗಳು

ಓದುಗರೆಲ್ಲರಿಂದಲೂ ವಿಮರ್ಶೆಗಳನ್ನಿಲ್ಲಿ ನಿರೀಕ್ಷಿಸಲಾಗದು
ಪ್ರತಿಕ್ರಿಯಿಸದೇ ಇರುವ ಓದುಗರನ್ನೂ ನಾ ತೆಗಳಲಾಗದು

ಬರೆದವನ ಮಾತು ತಟ್ಟಿದ ಹೃದಯಗಳ ಸಂಖ್ಯೆಯು ಮುಖ್ಯ
ವಿಮರ್ಶೆಯ ನೆಪದಲ್ಲಿ ಜನ್ಮ ಜಾಲಾಡುವುದಕ್ಕಲ್ಲ ಪ್ರಾಮುಖ್ಯ

ಈ ಮನದ ಭಾವನೆ ಓದುಗನ ಹೃದಯವನು ಹೊಕ್ಕರೆ ಸಾಕು
ಇನ್ನೊಂದು ಬರಹಕ್ಕೆ ಕಾಯುವವರಿರಲು ಮತ್ತಿನ್ನೇನು ಬೇಕು?

*****

One Response to ನಮಗೆ ಮತ್ತಿನ್ನೇನು ಬೇಕು?

  1. Nanaiah DC ಹೇಳುತ್ತಾರೆ:

    ಎಲ್ಲಾ ಓದುಗರಿಗೆ ಸ್ಪೂರ್ತಿಯಾಗುವಂತಹ ನಿಮ್ಮ ಬಾವನೆಗಳ ವ್ಯಕ್ತತೆ ಸುಂದರ ಮತ್ತು ಸ್ವಾಗತಾರ್ಹವಾಗಿದೆ.

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: