ನೀಲ ಆಗಸ ಮಲಗಿದೆ… ನೀಲ ಆಗಸ ಮಲಗಿದೆ!
ಕಣ್ಣ ನೀರಲಿ ಚಂದ್ರ ಮುಳುಗಿ, ರಾತ್ರಿ ಬರಡಾಯ್ತು
ನನ್ನ ಬಾಳಿನ ಏಕಾಂತ ಮುಗಿಯದಂತಾಯ್ತು!
ನಾನುಂಡ ನೋವು ಬಲು ಕಡಿಮೆ
ನೋವನ್ನೇ ಸುರಿದಿದೆ ನಿನ್ನೊಲುಮೆ
||ನೀಲ ಆಗಸ ಮಲಗಿದೆ||
ಹಳೆಯ ಗಾಥೆ ಕೇಳಿ ಬರುತಿದೆ ನೆನಪಿನಲೆಗಳಲಿ
ಜೊತೆಗೆ ನಡೆದವರು ಅಪರಿಚಿತರಿಂದೀ ಬಾಳ ಹಾದಿಯಲಿ
ನನ್ನ ಒಲವಿನ ದಾಹ ಆರಿಲ್ಲ
ಮನದೊಳಗೆ ಉಲ್ಲಾಸವೂ ಇಲ್ಲ!||ನೀಲ ಆಗಸ ಮಲಗಿದೆ||
ಜೊತೆಗೆ ನಡೆದವರು ಅಪರಿಚಿತರಿಂದೀ ಬಾಳ ಹಾದಿಯಲಿ
ನನ್ನ ಒಲವಿನ ದಾಹ ಆರಿಲ್ಲ
ಮನದೊಳಗೆ ಉಲ್ಲಾಸವೂ ಇಲ್ಲ!||ನೀಲ ಆಗಸ ಮಲಗಿದೆ||