ಹೋಗಲೆಲ್ಲಿಗೆ ಮನವೇ!

ಹೋಗೆಂದರೆ ಹೋಗಲೆಲ್ಲಿಗೆ ಮನವೇ
ಬಲು ನಿಷ್ಕರುಣಿಯಾಗಿದೆ ಈ ಜಗವೇ
ಬೆಳದಿಂಗಳು ಮನೆಯ ಸುಡಲು ಬಂದಂತಿದೆ
ಹೋಗಲು ನನಗೀಗ ದಿಕ್ಕೇ ಕಾಣದಂತಾಗಿದೆ

ಆಶಾಗೋಪುರಗಳು ರೂಪುಗೊಂಡು ಬೀಳುತ್ತಲಿವೆ
ಆಕಾಶ ಭೂಮಿಗಳೆರಡೂ ಬದಲಾಗಿಬಿಟ್ಟಿರುವಂತಿವೆ

ನನ್ನೀ ಜೀವನವೆನ್ನನು ಜಗದಿಂದ ತೆರಳೆನ್ನುವಂತಿದೆ

||ಹೋಗೆಂದರೆ ಹೋಗಲೆಲ್ಲಿಗೆ ಮನವೇ
ಬಲು ನಿಷ್ಕರುಣಿಯಾಗಿದೆ ಈ ಜಗವೇ||

ಇತ್ತಕಡೆ ಕಣ್ಣೀರು ತುಂಬಿದ ಹಾದಿಯಿದೆ
ಅತ್ತಲೇನಿದೆಯೆಂದು ಇಲ್ಲಾರಿಗೆ ಅರಿವಿದೆ
ಪ್ರತಿ ಕ್ಷಣವೂ ನನ್ನೀ ನೋಟ ಏಟು ತಿನ್ನುತ್ತಲಿದೆ

||ಹೋಗೆಂದರೆ ಹೋಗಲೆಲ್ಲಿಗೆ ಮನವೇ
ಬಲು ನಿಷ್ಕರುಣಿಯಾಗಿದೆ ಈ ಜಗವೇ||

ಮುಕೇಶ್ ಹಾಡಿರುವ “ಜಾಂವೂ ಕಹಾಂ ಬತಾಯೇ ದಿಲ್” ಹಾಡಿನ ಭಾವಾನುವಾದದ ಯತ್ನ!

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: