ಸಖೀ,
ನಾನು ಆಡುವ ಮಾತುಗಳೆಲ್ಲಾ ನನ್ನವು
ಹಾಗೆಯೇ ನಿನ್ನ ಮಾತುಗಳೆಲ್ಲಾ ನಿನ್ನವು
ಈ ಭಾವ ಭಾವಗಳ ಬಂಧ ಬಿಗಿಯಾಗಿರಲು
ಸಂಬಂಧಗಳ ನಡುವೆ ಇರದು ಪರೀಕ್ಷೆಗಳು
ಮೌನ–ಮಾತು ಮಾತು-ಮೌನ ಹೀಗೆಯೇ
ಸಾಗುತ್ತಿರಬೇಕೀ ಜೀವನ ಎಂದಿನಂತೆಯೇ
ಆಡಿದ ಪ್ರತಿ ಮಾತಿನ ಮರಣೋತ್ತರ ಪರೀಕ್ಷೆ
ಮಾಡಿದರೆ ಈ ಜೀವನವೇ ಆದೀತೊಂದು ಶಿಕ್ಷೆ
ನನ್ನ ಭಾವಗಳಿಗೆ ನಾನೇ ಜವಾಬ್ದಾರ ನೀನಲ್ಲ
ನಿನ್ನನಿಸಿಕೆಗಳಿಗೆ ಜವಾಬ್ದಾರಳು ನೀ ನಾ…ನಲ್ಲ!
************************
ಕವನ ಅರ್ಥಗರ್ಭಿತವಾಗಿ ಸುಖಮಯ ಜೀವನಕ್ಕೆ ಹಿತ ನುಡಿಯಂತಿದೆ. ಬಹುಶ ಮರಣೋತ್ತರ ಪರೀಕ್ಷೆಯಾಗದಿದ್ದರೆ, ಮಾತು ಮನೆ ಕೆದಿಸಲಾರದು.
ದನ್ಯವಾದಗಳು.