ಒಂದೆರಡು ದಿನಗಳ ಕವಿ ನಾನು!

||ಒಂದೆರಡು ದಿನಗಳ ಕವಿ ನಾನು ಒಂದೆರಡು ದಿನಗಳೆ ಬರೆಯುವೆನು
ಒಂದೆರಡು ದಿನಗಳ ಹುಮ್ಮಸ್ಸು ಒಂದೆರಡು ದಿನಗಳ ಈ ಆಯುಸ್ಸು||

ನನಗಿಂತಲು ಮೊದಲೂ ಎಷ್ಟೊಂದು ಕವಿಗಳು ಬಂದು ಹೋಗಿಹರು
ಗೀತೆಗಳನು ಹಾಡಿ ಹೋಗಿಹರು ಮನಗಳ ಮುದಗೊಳಿಸಿ ತೆರಳಿಹರು
ಅವರೂ ಅರೆಗಳಿಗೆಯ ಕತೆಯಂತೆ, ನಾನೂ ಈ ಗಳಿಗೆಯ ಕತೆಯಂತೆ
ನಾಳೆ ನಿಮ್ಮನೇ ನಾನು ಅಗಲುವೆನು, ಆದರಿಂದು ನಿಮ್ಮವನೇ ನಾನು!

||ಒಂದೆರಡು ದಿನಗಳ ಕವಿ ನಾನು ಒಂದೆರಡು ದಿನಗಳೆ ಬರೆಯುವೆನು
ಒಂದೆರಡು ದಿನಗಳ ಹುಮ್ಮಸ್ಸು ಒಂದೆರಡು ದಿನಗಳ ಈ ಆಯುಸ್ಸು||

 

ನಾಳೆ ಇನ್ನಾರೋ ಬರಬಹುದು ಕವಿತಾ ಸುಮಗಳನ್ನಾರಿಸುವವರು
ನನಗಿಂತಲೂ ಚೆನ್ನ ನುಡಿವವರು ನಿಮಗಿಂತಲೂ ಚೆನ್ನಾಲಿಸುವವರು
ನಾಳೆ ಯಾರೆನ್ನಾ ನೆನೆಯುವರು ಯಾರೇಕೆ ನನ್ನಾ ನೆನೆಯುವರು
ಬಿಡುವಿಲ್ಲದ ಮಂದಿ ನನಗಾಗಿ ತಮ್ಮ ಸಮಯವ ವ್ಯರ್ಥ ವ್ಯಯಿಸುವರು?

 

||ಒಂದೆರಡು ದಿನಗಳ ಕವಿ ನಾನು ಒಂದೆರಡು ದಿನಗಳೆ ಬರೆಯುವೆನು
ಒಂದೆರಡು ದಿನಗಳ ಹುಮ್ಮಸ್ಸು ಒಂದೆರಡು ದಿನಗಳ ಈ ಆಯುಸ್ಸು||

5 Responses to ಒಂದೆರಡು ದಿನಗಳ ಕವಿ ನಾನು!

 1. chitraprasca ಹೇಳುತ್ತಾರೆ:

  ನನಗೆ ಕಭೀ ಕಭೀ ಹಿಂದಿ ಚಿತ್ರದ ಹಾಡು ಗೊತ್ತಿಲ್ಲ. ಆದರೆ ನೀವು ಮಾಡಿರುವ ಭಾವಾನುವಾದ ಚೆನ್ನಾಗಿದಿ

 2. Srikar ಹೇಳುತ್ತಾರೆ:

  ದಿನಕ್ಕಿಂತ ಕ್ಷಣ ಎಂದಿದ್ದರೆ ಚೆನ್ನರಿಗುತ್ತಿತ್ತು.

  • ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
   ಅದೇ ಕಾರಣಕ್ಕಾಗಿಯೇ ನಾನು ಇದನ್ನು ಭಾವಾನುವಾದ ಅನ್ನುವುದು. ಭಾಷಾನುವಾದದಲ್ಲಿ ತಮ್ಮ ಮಾತುಗಳನ್ನು ಗಮನಿಸಬೇಕಾದ ಆವಶ್ಯಕತೆ ಇರುತ್ತದೆ. ಭಾವಾನುವಾದದಲ್ಲಿ ಆ ಆವಶ್ಯಕತೆ ಇರುವುದಿಲ್ಲ. ಮಾತುಗಳು ವಾಸ್ತವಕ್ಕೆ ಹತ್ತಿರವಾದರೆ ಚೆನ್ನ ಅಲ್ಲವೇ? ಹಿಂದೀಯಲ್ಲಿ ಪಲ್ ದೋ ಪಲ್ ಅಂತಾರೆ ನಿಜ. ಅದರೆ ನಾವು ಕನ್ನಡದಲ್ಲಿ ಒಂದೆರಡು ದಿನಗಳ ಜೀವನ ಅಂತ ತಾನೇ ಹೆಚ್ಚಾಗಿ ಬಳಸುವುದು? ಕ್ಷಣಗಳ ಅಥವಾ ಗಳಿಗೆಗಳ ಜೀವನ ಅಂತ ಯಾರೂ ಹೇಳುವುದಿಲ್ಲ ಎಂದು ನನ್ನ ಅನಿಸಿಕೆ. ಭಾವಾನುವಾದ ನಮ್ಮ, ಓದುಗ ವೃಂದದ, ಭಾವಕ್ಕೆ ಹತ್ತಿರವಾದರೆ ಚೆನ್ನ ಅಲ್ಲವೇ?

 3. ksraghavendranavadaksraghavendranavada ಹೇಳುತ್ತಾರೆ:

  ಚೆ೦ದದ ಸಾಲುಗಳ ಚರಣಗಳು!

  ಅವರೂ ಅರೆಗಳಿಗೆಯ ಕತೆಯಂತೆ, ನಾನೂ ಈ ಗಳಿಗೆಯ ಕತೆಯಂತೆ
  ನಾಳೆ ಇನ್ನಾರು ನೆನೆಯುವರು ನನ್ನನ್ನು ಇನ್ಯಾಕೆ ನೆನೆಯುವರು
  ಪುರುಸೊತ್ತಿಲ್ಲದ ಈ ಜನರಿನ್ನು ನನಗಾಗಿ ಕಾಲವ ವ್ಯಯಿಸುವರು?

  ಒಳ್ಳೆಯ ಅರ್ಥಬದ್ಧವಾದ ಸಾಲುಗಳು.

  ಕವನ ಸೊಗಸಾಗಿ ಮೂಡಿಬ೦ದಿದೆ. ಧನ್ಯವಾದಗಳು.
  ನಮಸ್ಕಾರಗಳೊ೦ದಿಗೆ,
  ನಿಮ್ಮವ ನಾವಡ.

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: