ಕತೆ ಹೇಳುತ್ತಾರೆ … ಮನಗಳನ್ನು ಬಿಚ್ಚಿಡುತ್ತಾರೆ!


ಕತೆ ಹೇಳುತ್ತಾರೆ, ತಮ್ಮ ಮುಂದೆ ಕೂರಿಸಿಕೊಂಡು ತಮ್ಮ ಮನಗಳನ್ನು ಬಿಚ್ಚಿಡುತ್ತಾರೆ
ಕಂಡವಂತೆಯೇ, ಬರೇ ಕೇಳಿದವರೂ ಅಷ್ಟೇ ಕರೆಮಾಡಿ ಮನದೊಳಗಿಳಿದುಬಿಡುತ್ತಾರೆ

ಕೇಳಿದ ಕತೆಗಳಿಗೆ ಲೆಕ್ಕವಿಟ್ಟಿಲ್ಲ, ಇಟ್ಟಿದ್ದರೂ ಬಹುಶಃ ಲೆಕ್ಕಕ್ಕೆ ಸಿಗಲಾರದಷ್ಟು ಕತೆಗಳು
ಬರಹಗಾರನೀತ, ಬಹಿರಂಗಗೊಳಿಸಬಹುದು ಎನ್ನುವ ಅಳುಕಿಲ್ಲದ ಆತ್ಮೀಯರ ಕತೆಗಳು

ಎಲ್ಲರ ಕತೆಗಳೂ ನೆನಪಿವೆ, ಒಮ್ಮೊಮ್ಮೆ ಮನಪಟಲದ ಮೇಲೆ ಮೆರವಣಿಗೆ ನಡೆಸುತ್ತವೆ
ಒಮ್ಮೊಮ್ಮೆ ನನ್ನ ಅರ್ಹತೆಯೇನೆಂದು ನನ್ನನ್ನೇ ನಾನು ಪ್ರಶ್ನಿಸಿಕೊಂಬಂತೆ ಮಾಡುತ್ತವೆ

ಬರೆಯಲು ಕೂತರೆ ಒಬ್ಬೊಬ್ಬರದೂ ಒಂದೊಂದು ಕಾದಂಬರಿಯಾಗಿ ಹೊಮ್ಮಬಹುದು
ಬರೆದರೆ ನನ್ನವರೆಲ್ಲರ ಖಾಸಗಿ ವಿಷಯಗಳು ಅನಾವರಣಗೊಂಡು ನೋವಾಗಬಹುದು

ನಮ್ಮೆಲ್ಲಾ ನಿರ್ಧಾರಗಳನ್ನೂ ಸಕಾಲದಲ್ಲಿ ಸಕಾರಣಗಳೊಂದಿಗೇ ತೆಗೆದುಕೊಂಡರೆ ಚೆನ್ನ
ತರಾತುರಿಯಲ್ಲಿ ಎಲ್ಲವನ್ನೂ ಬಿಚ್ಚಿಟ್ಟರೆ, ಎಲ್ಲರೊಂದಿಗೆ ನಾನನಿಸಿಕೊಳ್ಳಬಹುದು ಕೃತಘ್ನ!
*****************************************************

One Response to ಕತೆ ಹೇಳುತ್ತಾರೆ … ಮನಗಳನ್ನು ಬಿಚ್ಚಿಡುತ್ತಾರೆ!

  1. ksraghavendranavadaksraghavendranavada ಹೇಳುತ್ತಾರೆ:

    ನೀವು ಆ ಥರದವರಲ್ಲವೆ೦ದೇ ನಿಮ್ಮೊ೦ದಿಗೆ ಕಥೆ ಹೇಳಿಕೊಳ್ಳುತ್ತಾರೆ! ಎ೦ಬುದು ನೆನಪಿದ್ದರೆ ಸಾಕು.. ಕೃತಘ್ನನಾಗಲು ಸಾಧ್ಯವಿಲ್ಲ!!
    ಚೆನ್ನಾಗಿದೆ.
    ನಮಸ್ಕಾರಗಳೊ೦ದಿಗೆ,
    ನಿಮ್ಮವ ನಾವಡ.

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: