ನೆನಪಷ್ಟೇ ಉಳಿದಿದೆ

ಕಳೆದು ಹೋದವರ ನೆನಪಲ್ಲಿ ಕೂತು ಸದಾ ಅಳಲಾಗುವುದಿಲ್ಲ,

ಕಳೆದು ಹೋದವರ ಮರೆತು ನೆಮ್ಮದಿಯಾಗಿರಲೂ ಆಗುವುದಿಲ್ಲ;

ನೆನಪಿನ ಮೆರವಣಿಗೆಯ ನಡುನಡುವೆ ಮರೆವಿನಾಟಗಳೂ ಸಾಗಿವೆ,

ಮರೆತಿಹ ಮನದಂಗಳದಲ್ಲಿ ನೆನಪಿನ ಹೆಜ್ಜೆಗಳು ಮೂಡಿ ಕಾಡಿವೆ;

ಮರೆತೆವೆಂದವರನ್ನು ನಿಜದಿ ನಾವೆಂದಿಗೂ ಮರೆಯಲಾಗುವುದಿಲ್ಲ,

ಮರೆಯಲೇ ಆಗದು ಎಂದವರನ್ನೇ ಮರೆತು ನಾವು ಬಾಳುತಿಹೆವಲ್ಲ?

ಕಾಲಚಕ್ರದಲ್ಲಿ ಎಲ್ಲವೂ ಮರುಕಳಿಸುವುದು ಎಂಬೊಂದು ಮಾತಿದೆ,

ಆದರೆ ಕಾಲಚಕ್ರದಲ್ಲಿ ಅಗಲಿಹೋದವರ ಮುಖ ಮತ್ತೆಲ್ಲಿ ಕಂಡಿದೆ?

ನೀನಿಲ್ಲದೇ ಕಷ್ಟ ಎಂದವರ ಗೋರಿಯ ಮೇಲೆ ಈ ಜೀವನ ಸಾಗಿದೆ,

ಎಂದಿಗೂ ನಿನ್ನನ್ನಗಲಲಾರೆ ಎಂದವರ ನೆನಪಷ್ಟೇ ಈಗ ಉಳಿದಿದೆ!

***************

 

One Response to ನೆನಪಷ್ಟೇ ಉಳಿದಿದೆ

  1. ksraghavendranavada ಹೇಳುತ್ತಾರೆ:

    ಹೂ೦.. ಮರೆತೆ ಎನ್ನುವುದು ಸುಳ್ಳು… ಎಲ್ಲರೂ ಒ೦ದಿಲ್ಲೊ೦ದು ಕಾರಣಕ್ಕೆ ನೆನಪಾಗುತ್ತಲೇ ಇರುತ್ತಾರೆ! ಬದುಕೇ ಮರೆವು ನೆನಪುಗಳ ಮಿಶ್ರಣ ವಲ್ಲವೆ?
    ಸೂಚ್ಯವಾಗಿ ಎಲ್ಲವನ್ನೂ ಜೀವನ-ವೈರುಧ್ಯಗಳನ್ನು ತಿಳಿಸಿದ ನಿಮಗೆ ವ೦ದನೆ.. ನಾವಿಬ್ಬರೂ ಈಗ ಒ೦ದೇ ಮನಸ್ಥಿತಿಯಲ್ಲಿರುವುದ೦ತೂ ಹೌದು.
    ನಮಸ್ಕಾರಗಳೊ೦ದಿಗೆ,
    ನಿಮ್ಮವ ನಾವಡ.

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: