ಈ ಅಪರಾಹ್ನ ನನ್ನ ತಮ್ಮನ
ಸಂದೇಶ ಬಂದಾಗ ನಂಬಲಾಗದೇ ಕರೆ
ಮಾಡಿ ದೃಢಪಡಿಸಿಕೊಂಡಿದ್ದೆ ಸುದ್ದಿಯನ್ನು
ನಲವತ್ತು ವರುಷಗಳ ಹಿಂದೆ
ದೀಪದ ಗುರುತಿನ ಆಚಾರ್ಯರ ಹಿಂದೆ
ರಾಜಕೀಯದ ಅರಿವಿಲ್ಲದಿದ್ದರೂ ಓಡಾಡಿದವನು
ರಾಜಕೀಯದ ಗುಂಗು ನನ್ನೀ
ತಲೆಯೊಳಗೆ ತುಂಬಿಕೊಂಡ ದಿನದಿಂದಲೂ
ಆಚಾರ್ಯರ ಬಗ್ಗೆ ಗೌರವ ಇರಿಸಿಕೊಂಡವನು
ತತ್ವ ನಿಷ್ಠ ರಾಜಕಾರಣಿಗಳಲ್ಲಿ
ಆಚಾರ್ಯರನ್ನು ಮೀರಿ ನಿಲುವವರು ಇಂದು
ಬಹುಶಃ ಯಾರೂ ಇಲ್ಲವೆಂದು ದೃಢವಾಗಿ ನಂಬಿರುವವನು
ಹಠಾತ್ತನೇ ತನ್ನೆಡೆಗೆ ಸೆಳೆದುಕೊಂಡ
ಆ ದೇವ ಆಚಾರ್ಯರಾತ್ಮಕ್ಕೆ ಚಿರಶಾಂತಿ
ಕರುಣಿಸಲಿ ಎಂದು ನೊಂದ ಮನದಿಂದ ಹಾರೈಸುತಿಹೆನು
*****************************
ನಮ್ಮ ಮನಗಳೇ ಇಷ್ಟೊಂದು ನೊಂದಿರುವಾಗ
ಎಷ್ಟೊಂದು ನೊಂದಿರಬಹುದು ಆ ಹಿರಿಯ ಜೀವ?
ಬಹುಶಃ ಅವರಿಗೂ ಅನಿಸಿರಬಹುದು ಇನ್ನೇನು
ಮಾಡಿಲಿದೆ ತಾನು ಇಲ್ಲಿ ಇರಿಸಿಕೊಂಡು ಜೀವ?
ಭಾಜಪಾದ ಕೆಸರಲ್ಲಿ ಕಮಲವಾಗಿಯೇ ಉಳಿದಿದ್ದವರು
ಕಮಲಧ್ವಜ ನೀಲಿಯಾದಾಗ ಸದ್ದಿಲ್ಲದೇ ನಡೆದಿಹರು!
ಚೆನ್ನಾಗಿದೆ ಸರ್ ….ಕನ್ನಡ ನಾಡು ಕಂಡ ಧೀಮಂತ, ಸ್ವಚ್ಛ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದರು…ಅವರ ನಿಧನ ರಾಜ್ಯಕ್ಕೆ ತುಂಬಲಾಗದ ನಷ್ಟ……
ನನ್ನ ಬ್ಲಾಗ್ ಗೂ ಬನ್ನಿ ಸರ್….
http://ashokkodlady.blogspot.com/