ದೇವಾ, ನೈವೇದ್ಯ ಸಿಗದಿದ್ದರೆ ಬೇಡ ಕೋಪ!

 

ಲಂಚ ಪಡೆಯುವುದೂ ತಪ್ಪು ಹಾಗೂ ಲಂಚ ಕೊಡುವುದೂ ತಪ್ಪು
ಮಹಾತ್ಮ ಹಜಾರೆ ನಮ್ಮೆಲ್ಲರ ಕಣ್ಣು ತೆರೆಸಿದ್ದಾರೆ, ನೀನೂ ಒಪ್ಪು

ಪರರಿಗೆ ಅನ್ಯಾಯವಾಗದಂತೆ ಬಾಳುವುದದು ನಮ್ಮ ಕರ್ತವ್ಯ
ನಮಗೆ ಒಳ್ಳೆಯದಾಗುವಂತೆ ಸಹಕರಿಸುವುದು ನಿನ್ನ ಕರ್ತವ್ಯ

ನಮ್ಮ ಸತ್ಕರ್ಮಗಳೇ ನಮ್ಮನ್ನು ಕಾಪಾಡಬೇಕು ಎಂಬ ನಂಬಿಕೆ
ನಮ್ಮ ಕುಕರ್ಮಗಳಿಂದಲೇ ನಮಗೆ ಶಿಕ್ಷೆ ಎಂಬುವುದೂ ನಂಬಿಕೆ

ನಾವು ಏನೆಂಬುದ ನೀನು ಅರಿತಿರುವೆ ಹಾಗಾಗಿ ನಮಗಿಲ್ಲ ಭಯ
ನಮ್ಮ ಅರ್ಹತೆಗೆ ತಕ್ಕುದಾದುದೇ ದಕ್ಕುವುದು ಅದು ನಿನ್ನ ನ್ಯಾಯ

ಎಲ್ಲವೂ ನಮ್ಮ ಆಚಾರ ವಿಚಾರಗಳಿಂದಲೇ ಆಗಬೇಕು ನಿರ್ಧಾರ
ಹಾಗಾಗಿ ನಿನಗೆ ಲಂಚ ನೀಡಲಾರೆವಿನ್ನು, ಇದು ನಮ್ಮ ನಿರ್ಧಾರ

ಇನ್ನು ನಿನಗೆ  ಪೂಜೆ, ನೈವೇದ್ಯ, ಕಾಣಿಕೆ, ಸಿಗದಿದ್ದರೆ ಬೇಡ ಕೋಪ
ಅಣ್ಣರ ಕಣ್ಣುಗಳಿಗೆಲ್ಲಾದರೂ ಬಿದ್ದರೆ ನಮ್ಮಿಬ್ಬರ ಗತಿ, ಅಯ್ಯೋ ಪಾಪ

ಏಕೆಂದರೆ ಲಂಚ ಪಡೆಯುವುದೂ ತಪ್ಪು, ಲಂಚ ಕೊಡುವುದೂ ತಪ್ಪು
ಮಹಾತ್ಮ ಹಜಾರೆ ನಮ್ಮೆಲ್ಲರ ಕಣ್ಣು ತೆರೆಸಿದ್ದಾರೆ, ನೀನೂ ಒಪ್ಪು!
************************

2 Responses to ದೇವಾ, ನೈವೇದ್ಯ ಸಿಗದಿದ್ದರೆ ಬೇಡ ಕೋಪ!

 1. ksraghavendranavada ಹೇಳುತ್ತಾರೆ:

  ಆ ತಾಯಿಯು ಎ೦ದೂ ಮಕ್ಕಳಲ್ಲಿ ಏನನ್ನೂ ಕೇಳುತ್ತಿಲ್ಲ… ಕೇಳಲಾರಳು.. ಕೊಡುವುದನ್ನು ಮಾತ್ರ ಬಿಟ್ಟು ಅವಳೆ೦ದೂ ಸುಮ್ಮನಿರಳು.. ಆದರೆ ನಾವೇ ದಿನವಹಿ ಮಾಡುವ ನೂರೆ೦ಟು ತಪ್ಪುಗಳಿ೦ದ ಬಚಾವಾಗಲು ಅವಳಿಗೆ ನೈವೇದ್ಯ ನೀಡುತ್ತಲೇ, ಅವಳದನ್ನು ಸ್ವೀಕರಿಸಿದ್ದಾಳೆ೦ದು ತಿಳಿದು.. ಪುನ: ಮತ್ತದೇ ತಪ್ಪು ಮಾಡುತ್ತೇವೆ. ಮತ್ತೆ ನೈವೇದ್ಯ..ಪ್ರಾರ್ಥನೆ.. ತಪ್ಪು.. ಹೀಗೆ ನಾವು ಸಾಯುವವರೆಗೂ ನಮ್ಮ೦ತಹ ಆಸ್ತಿಕರಿ೦ದ ಈ ತಪ್ಪು ಘಟಿಸುತ್ತಲೇ ಇರುತ್ತದೆ.. ಅವಳೂ ಅದನ್ನು ಗಮನಿಸುತ್ತಲೇ ಇರುತ್ತಾಳೆ!

  ಅವಳೆ ಅಣ್ಣಾ ಹಜಾರೆಯನ್ನು ತನ್ನಿಮಿತ್ತ ಈ ನಾಡನ್ನು ಪಾಪಗಳಿ೦ದ ಮುಕ್ತಗೊಳಿಸಲು ಕಳುಹಿಸಿರಲೂ ಬಹುದೇನೋ!

  ಮರ್ಮಾರ್ಥ ಹುಡುಕಬೇಕು..ಅರಿವನ್ನೀಯುವ ಕವನ..

  ನಮಸ್ಕಾರಗಳೊ೦ದಿಗೆ,
  ನಿಮ್ಮವ ನಾವಡ.

  • ಆಸು ಹೆಗ್ಡೆ ಹೇಳುತ್ತಾರೆ:

   ರಾಘವೇಂದ್ರ,
   ಭಗವಂತನ ನಿರ್ಣಯಗಳು ಅವೇನೇ ಇದ್ದರೂ, ನಾವು ನಮಗೆ ಅನುಕೂಲವಾಗುವ ರೀತಿಯಲ್ಲಿ ಅರ್ಥೈಸಿಕೊಂಡು ನಿರ್ಧಾರಕ್ಕೆ ಬರುವುದು ಮಾನವ ಸಹಜ ಗುಣ.
   ಹಾಗಾಗಿ ನನ್ನ ಈ ನಿರ್ಧಾರ.
   ಮರ್ಮಾರ್ಥವಿದೆ, ಅದನ್ನು ಹುಡುಕಬೇಕೆನ್ನುವ ತಮ್ಮ ಮಾತು, ನನ್ನ ಶ್ರಮವನ್ನು ಸಾರ್ಥಕಗೊಳಿಸಿತು,
   ಧನ್ಯವಾದಗಳು.

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: