ಜೊತೆಗೆ ನೀನಿದ್ದರೆ ಮುಪ್ಪು ಬರದೆನಗೆ ನೋಡ!

ಐವತ್ತಕ್ಕೆ ತಲುಪಿದೆ ನನ್ನಯ ಜನ್ಮದಿನಗಳ ಲೆಕ್ಕ ಬಂದು
ಜೀವನದ ಸ್ವರ್ಣ ವರುಷ ಆರಂಭವಾದ ಶುಭದಿನವಿಂದು

ಅರ್ಧಕ್ಕಿಂತಲೂ ಹೆಚ್ಚು ಮುಗಿದಿರಬಹುದೇನೋ ಆಯಸ್ಸು
ಆದರಿನ್ನೂ ಕುಂದಿಲ್ಲ ನನ್ನ ಈ ಮನದೊಳಗಿನ ಹುಮ್ಮಸ್ಸು

ಕಲೆ ಹಾಕಿ, ಕಲಿಯುವುದರಲ್ಲಿ ಕಳೆದವು ನನ್ನೆಲ್ಲಾ ದಿನಗಳು
ಹಂಚಿಕೊಂಬುದರಲ್ಲಿ ಕಳೆಯಲಿ ಇನ್ನು ಮುಂದಿನ ದಿನಗಳು

ಕಳೆದ ದಿನಗಳಲ್ಲಿ ನಾನು ಸಾಧಿಸಿದ್ದೇನೂ ಇಲ್ಲ ಬಹಳಷ್ಟು
ಸಾಧಿಸಲು ಇರಬೇಕು ನನ್ನ ಬಾಳಿನಲಿ ದಿನಗಳು ಇನ್ನಷ್ಟು

ಉಸಿರ ನಿಲ್ಲಿಸ ಬೇಡ, ದೇವ, ನನ್ನ ಆಯುಷ್ಯ ತೀರಿಸಬೇಡ
ನನ್ನ ಜೊತೆಗೆ ಸದಾ ನೀನಿದ್ದರೆ ಮುಪ್ಪು ಬರದೆನಗೆ ನೋಡ!

**********************************
ನನ್ನ ಐವತ್ತನೇ ಜನ್ಮದಿನದಂದಿನ (೧೬ ಜುಲಾಯಿ) ಮನದ ಮಾತುಗಳಿವು.

6 Responses to ಜೊತೆಗೆ ನೀನಿದ್ದರೆ ಮುಪ್ಪು ಬರದೆನಗೆ ನೋಡ!

 1. veda ಹೇಳುತ್ತಾರೆ:

  Belated birthday wishes Hegdeyavare.

 2. HEMA ಹೇಳುತ್ತಾರೆ:

  NAANOO DEVARALLI PRARTHISUVE,DEVARU NIMAGE AAYUSHYA AAROGYA DAYAPALISENDU.

 3. Chitra ಹೇಳುತ್ತಾರೆ:

  ಸುರೇಶ್,

  ಮೊದಲಿಗೆ ತಡವಾಗಿ ಹುಟ್ಟುಹಬ್ಬದ ಶುಭಾಶಯವನ್ನು ಹೇಳುತ್ತಿದ್ದೇನೆ. ನಿಮ್ಮ ಕವನವು ಸುಂದರವಾಗಿದ್ದೂ, ಹಾಗೆಯೇ ಆ ಭಗವಂತ ನಿಮಗೆ ಆರೋಗ್ಯ, ಆಯಸ್ಸು ಚೆನ್ನಾಗಿ ಕೊಟ್ಟು, ಮುಪ್ಪು ಬರದಂತೆ ಸದಾ ಕಾಯಲೆಂದು ಹಾರೈಸುವ

  ಚಿತ್ರ ಪ್ರಸನ್ನ

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: