ಪ್ರೀತಿಗೂ ಪಡಿತರ ಪದ್ಧತಿ ಬೇಕೆ?

ಸಂಬಂಧಗಳ ಸ್ನೇಹ ಬಂಧಗಳ
ನಡುವೆಯೂ, ಸದಾ ಇತಿ
ಮಿತಿ ಇರಬೇಕು, ಯಾವುದೂ
ಅತಿಯಾಗದೇ ಇರಲೆಂಬ ಮಾತ
ಸದಾ ಕೇಳುತ್ತಿರುವೆವು ನಾವು

ಈ ಮಾತಿನಿಂದಾಗಿ ಕೇಳಿದೆ
ಪ್ರಶ್ನೆಯೊಂದ ನನ್ನೀ ಮನವು,
ನಮ್ಮ ಮನದ ಭಾವನೆಗಳನ್ನೂ
ಪಡಿತರ ಪದ್ಧತಿಯ ಮೂಲಕ
ವಿತರಿಸುತಿರಬೇಕೇ ನಾವು?

ಇದ್ದರೆ ಇರಲಿ ಇತಿ ಮಿತಿ ಎಲ್ಲವೂ
ದ್ವೇಷ, ಹಿಂಸೆ ಮತ್ತಶಾಂತಿಗೆ
ಮಿತಿಯಿಲ್ಲದಿರಲಿ ಜಗದಿ ಸದಾ
ಪ್ರೀತಿ, ಶಾಂತಿ ಮತ್ತಹಿಂಸೆಗೆ

ಪ್ರೀತಿ ಅದೆಷ್ಟು ಹಂಚಿದರೆಂದಿಗೂ
ಮಿತಿ ಮೀರಿದೆಯೆಂದೆನಿಸದು
ಶಾಂತಿಯನದೆಷ್ಟು ಹರಡಿದರೂ
ಅತಿಯಾಯ್ತೆಂದು ಅನಿಸುತಿರದು
ಕಟ್ಟು ಕಟ್ಟಳೆಯದೇಕೆ ಅಹಿಂಸೆಗೆ
ಎಂದೆನ್ನೀ ಮನ ಅನ್ನುತ್ತಲಿಹುದು!
***************

10 Responses to ಪ್ರೀತಿಗೂ ಪಡಿತರ ಪದ್ಧತಿ ಬೇಕೆ?

 1. Rajendra B. Shetty ಹೇಳುತ್ತಾರೆ:

  ಪ್ರೀತಿಯ ಮಧ್ಯ ನಾವು ವಾಸ್ತವಿಕತೆಯನ್ನೂ ಮರೆಯಕೂಡದು. ಪ್ರೀತಿ ಹೊಟ್ಟೆ ತುಂಬಿಸುವದಿಲ್ಲ ಅನ್ನುವುದು ನಾವು ಮರೆಯಬಾರದು. ನಿರ್ಮಲ ಪ್ರೀತಿಗೂ, ಕಾಮಕ್ಕೊ ಸಂಬಂದ ಇದೆಯೆ? Sorry, this question is in wrong place. Today I read many poems on love. My experience in life made me to ask this question.If I love some one of opposite sex and if there is no trace of lust, how many persons will believe it?

  • ಆಸು ಹೆಗ್ಡೆ ಹೇಳುತ್ತಾರೆ:

   ರಾಜೇಂದ್ರ,
   “ಪ್ರೀತಿಯ ಮಧ್ಯ ನಾವು ವಾಸ್ತವಿಕತೆಯನ್ನೂ ಮರೆಯಕೂಡದು ಹಾಗೂ ಪ್ರೀತಿ ಹೊಟ್ಟೆ ತುಂಬಿಸುವದಿಲ್ಲ ಅನ್ನುವುದು ನಾವು ಮರೆಯಬಾರದು”
   – ಒಪ್ಪಬಹುದಾದ ಮಾತುಗಳು.
   “ನಿರ್ಮಲ ಪ್ರೀತಿಗೂ, ಕಾಮಕ್ಕೊ ಸಂಬಂದ ಇದೆಯೆ?”
   – ಪ್ರೀತಿ ಯಾವಾದಗಲೂ ನಿರ್ಮಲವೇ. ಕಲ್ಮಶವಾಗಿದ್ದರೆ ಅದು ಪ್ರೀತಿಯೇ ಅಲ್ಲ. ಪ್ರೀತಿಗೂ ಕಾಮಕ್ಕೂ ಸಂಬಂಧ ಇರಲೇ ಬೇಕೆಂದೇನೂ ಇಲ್ಲ. ಇರಬಾರದೆಂದೇನೂ ಇಲ್ಲ.
   ದೈಹಿಕ ಸಂಬಂಧಿಗಳ ನಡುವೆಯೂ ಪ್ರೀತಿ ಇರಬಹುದು.
   ಪ್ರೀತಿ ಇರುವಲ್ಲಿ ದೈಹಿಕ ಸಂಬಂಧವೂ ಇರಬಹುದು.
   ಆದರೆ ಸಂಬಂಧಕ್ಕಾಗಿಯೇ ಅಥವಾ ಕಾಮತೃಷೆಯನ್ನು ನೀಗಿಸಿಕೊಳ್ಳುವುದಕ್ಕಾಗಿಯೇ ಪ್ರೀತಿ ಮಾಡಿದರೆ, ಅದು ಪ್ರೀತಿಯೇ ಅಲ್ಲ. ಅದು ವ್ಯಾಪಾರ.
   “…if there is no trace of lust, how many persons will believe it?”

   ನಾವು ಪರರನ್ನು ನಂಬಿಸುವುದಕ್ಕಾಗಿಯೇ ಬದುಕಲಾಗುವುದಿಲ್ಲ.
   ಆದರೆ, ಪರರಿಗೆ ಅನುಮಾನ ಮೂಡುವ ರೀತಿಯಲ್ಲೂ ಬದುಕಲಾಗುವುದಿಲ್ಲ.
   ನಮ್ಮನ್ನು ಅರಿತವರು ನಮ್ಮ ಸಂಬಂಧಗಳನ್ನೂ, ನಮ್ಮ ಪ್ರೀತಿಪಾತ್ರರ ನಡುವಣ ಸ್ನೇಹವನ್ನೂ ಅರಿತಾರು. ಅದನ್ನು ಅರಿಯಲಾಗದವರು ನಮ್ಮನ್ನು ಸರಿಯಾಗಿ ಅರಿತಿಲ್ಲ ಎಂದರ್ಥ, ಅಷ್ಟೇ.

 2. ksraghavendranavada ಹೇಳುತ್ತಾರೆ:

  ಹ.ಹ.ಹ. ಬಿಪಿ.ಎಲ್. ಕಾರ್ಡುದಾರರ ಕಷ್ಟಗಳನ್ನು ಬಿ೦ಬಿಸುವ ಕವನವಿದೆ೦ದುಕೊ೦ಡೆ! ಇದು ಬೇರೆ ಮಾರಾಯ್ರೇ..!!

  ಮು೦ದೆ ಮಾನವರಿಗೆ ಭಾವನೆಗಳನ್ನು ಹುಟ್ಟಿಸಿಕೊಳ್ಳಲು ಶಾಲೆಯನ್ನು ತೆರೆಯಬೇಕಾದ ಅಗತ್ಯ ಕ೦ಡು ಬರಬಹುದು!!

  ಸರಳತೆಯಿ೦ದ ಕೂಡಿದ ಮಾರ್ಮಿಕಾರ್ಥ ಕವನ.. ಓದಿ ಚಿ೦ತೆಗೀಡಾದೆ…
  ದಿನನಿತ್ಯದ ಬೇಕು-ಬೇಡಗಳು- ಸಮಸ್ಯೆಗಳನ್ನು -ಬಾವನೆಗಳನ್ನು ಆಸುಮನದ ಮಾತುಗಳು ಸಶಕ್ತವಾಗಿ-ವಿಭಿನ್ನವಾಗಿ ಹೊರಹೊಮ್ಮಿಸುತ್ತವೆ! ಅದಕ್ಕಾಗಿ ಧನ್ಯವಾದಗಳು.
  ನಮಸ್ಕಾರಗಳೊ೦ದಿಗೆ,
  ನಿಮ್ಮವ ನಾವಡ.

 3. shashi jenny ಹೇಳುತ್ತಾರೆ:

  Preethige beda padithara himsegirali padithara,Chenngide

 4. ಹೇಮಾ ಹೇಳುತ್ತಾರೆ:

  ಹೆಗ್ಡೆಯವರೇ ನಿಮ್ಮ ಮಾತು ಸತ್ಯ.
  ನಿಜವಾದ ಪ್ರೀತಿಗೆ ಇತಿಮಿತಿ ಎಂಬುದಿಲ್ಲ.
  ಪವಿತ್ರವಾದ ಪ್ರೀತಿ ಕೊಟ್ಟಷ್ಟೂ ಹೆಚ್ಚುತ್ತದೆ ಎನ್ನುವುದೂ ಸತ್ಯ.
  ಮುಖವಾಡ ತುಂಬಿದ ಜನರ ನಡುವೆ ಆ ತೆರನಾದ ಪ್ರೀತಿಯನ್ನು ಹುಡುಕುವುದು ಕಷ್ಟ ಅಲ್ಲವೇ?
  ನಿಮಗೂ ಆ ಅನುಭವ ಆಗಿರಬಹುದೇನೋ!
  ನಿಮ್ಮ ಕವನ ತುಂಬಾ ಇಷ್ಟ ಆಯ್ತು. ಪ್ರೀತಿಯನ್ನು ಎಷ್ಟು ಹಂಚಿದರೂ ಮಿತಿ ಮೀರಿದೆ ಎಂದೆನಿಸದು.

  • ಆಸು ಹೆಗ್ಡೆ ಹೇಳುತ್ತಾರೆ:

   ಹೇಮಕ್ಕಾ,
   ಮುಖವಾಡ ತುಂಬಿದ ಜನರ ನಡುವೆ ನಿಸ್ವಾರ್ಥ ಪ್ರೀತಿಯನು ಗುರುತಿಸುವುದು ಕಷ್ಟವಾಗಲೂಬಹುದು.
   ಆದರೆ, ನಿಸ್ವಾರ್ಥವಾಗಿ ಪ್ರೀತಿಸುವ ಒಂದು ಹೃದಯ, ನಿಸ್ವಾರ್ಥ ಪ್ರೀತಿ ತುಂಬಿದ ಇನ್ನೊಂದು ಹೃದಯವನ್ನು ಗುತಿಸದೇ ಇರದು.
   ಮಖವಾಡ ಹೊತ್ತ ಸಾವಿರಾರು ಮಂದಿಯ ವ್ಯಾವಹಾರಿಕ ಪ್ರೀತಿಗಿಂತಲೂ, ನೈಜಪ್ರೀತಿ ತುಂಬಿದ ಒಂದು ಹೃದಯ ನಮ್ಮ ಸಂಗಡ ಇದ್ದರೆ, ಈ ಜೀವನ ನಿಜಕ್ಕೂ ಪಾವನವಾದೀತು. ಈ ಭೂಮಿಯ ಮೇಲೆಯೇ ಈ ಆತ್ಮಕ್ಕೆ ಮುಕ್ತಿ ದೊರೆತೀತು.
   ತಮ್ಮ ಪ್ರತಿಕ್ರಿಯೆಗಾಗಿ ಧನ್ಯವಾದಗಳು.

 5. ಲತಾ ಹೇಳುತ್ತಾರೆ:

  ಹೆಗ್ಡೆಜೀ,
  ಪ್ರೀತಿ ಸ್ವಾರ್ಥದಿಂದ ಕೂಡಿದಲ್ಲಿ ಮಾತ್ರ ಕಷ್ಟ ನಷ್ಟ.
  ನಿಸ್ವಾರ್ಥದಿಂದ ಕೂಡಿದ ಪ್ರೀತಿಯ ಅನುಭವವೇ ಬೇರೆ ಅಲ್ಲವೇ?

  • ಆಸು ಹೆಗ್ಡೆ ಹೇಳುತ್ತಾರೆ:

   ಲತಾಜೀ,
   ಸ್ವಾರ್ಥದಿಂದ ಕೂಡಿದ ಯಾವುದೇ ಆಗಲಿ ಅದು ವ್ಯಾಪಾರವಾಗುತ್ತದೆ.
   ಪ್ರೀತಿಯೂ ಪ್ರೀತಿಯಾಗಿ ಉಳಿಯುವುದಿಲ್ಲ.
   ಪ್ರೀತಿ ಎನ್ನುವುದು ಪ್ರೀತಿ ಎನಿಸಿಕೊಳ್ಳುವುದು ನಿಸ್ವಾರ್ಥವಾಗಿ ಉಳಿದಿರುವ ತನಕ ಮಾತ್ರ.
   ನಾನು ಇಲ್ಲಿ ಹೇಳಿರುವುದು ಅಂತಹ ಪ್ರೀತಿಯ ಬಗ್ಗೆ, ಮಾತ್ರ.
   ತಮ್ಮ ಪ್ರತಿಕ್ರಿಯೆಗಾಗಿ ಕೃತಜ್ಞತೆಗಳು!

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: