ಜೀವನದ ಹಾದಿಯಲಿ ತುಂಬಿಹುದು ಕಣ್ಣೀರು!

(ಇನ್ನೊಂದು ಭಾವಾನುವಾದದ ಯತ್ನ)

ಜೀವನದ ಹಾದಿಯಲಿ ತುಂಬಿಹುದು ಕಣ್ಣೀರು
ಮರೆಯಲಿ ಎನ್ನನೆಂದು ಹೇಳಿ ಆಕೆಗೆ ಯಾರಾದರೂ

ಆಣೆಗಳ ಮರೆಯಲಿ ಮಾತುಗಳ ಮರೆಯಲಿ
ನನ್ನಷ್ಟಕ್ಕೆ ನನ್ನನ್ನು ಇರಲು ಬಿಟ್ಟು ಬಿಡಲಿ
ಇಂಥಾ ಈ ಜಗದಿ ನಾ ಮನಸೇಕೆ ಕೊಡಲಿ
ಮರೆಯಲಿ ಎನ್ನನೆಂದು ಹೇಳಿ ಆಕೆಗೆ ಯಾರಾದರೂ

ಎಲ್ಲಾ ಕಳೆದುಕೊಂಡಿಹನ ವಿಚಿತ್ರ ಕಥೆ ನಾನು
ಇಬ್ಬನಿಗೂ ಅಳು ಬರಿಸೋ ಆಕಾಶ ನಾನು
ನಿನ್ನ ನೆಲೆ ನಿನಗಿರಲಿ, ನನಗೆನ್ನಾ ಹಾದಿ
ಮರೆಯಲಿ ಎನ್ನನೆಂದು ಹೇಳಿ ಆಕೆಗೆ ಯಾರಾದರೂ
***************

ಮೂಲ ಗೀತೆ:
ಚಿತ್ರ : ಪರ್ವರಿಶ್
ಗಾಯಕರು: ಮುಕೇಶ್

ಆಂಸೂ ಭರೀ ಹೈ ಎ ಜೀವನ್ ಕೀ ರಾಹೇಂ
ಕೊಯೀ ಉನ್ ಸೇ ಕಹ್ ದೇ ಹಮೇ ಭೂಲ್ ಜಾಯೇಂ
ಆಂಸೂ ಭರೀ ಹೈ

ವಾದೇ ಬುಲಾ ದೇ ಕಸಮ್ ತೋಡ್  ದೇ ವೋ
ಹಾಲತ್ ಪೆ ಅಪ್ನೀ ಹಮೇ ಚೋಡ್ ದೇ ವೊ
ಐಸೇ ಜಹಾಂ ಸೆ ಕ್ಯೋಂ ಹಮ್ ದಿಲ್ ಲಗಾಯೇಂ
ಕೊಯೀ ಉನ್ ಸೇ ಕಹ್ ದೇ

ಬರ‍್ಬಾದೀಯೋಂ ಕಾ ಅಜಬ್ ದಾಸ್ತಾ ಹೂಂ
ಶಬ್‍ನಮ್ ಭೀ ರೋಯೇ ಮೈ ವೋ ಆಸ್ಮಾ ಹೂಂ
ತುಮೇ ಘರ್ ಮುಬಾರಕ್ ಹಮೇ ಅಪ್ನೀ ರಾಹೇಂ
ಕೋಯೀ ಉನ್ ಸೇ ಕಹ್ ದೇ

2 Responses to ಜೀವನದ ಹಾದಿಯಲಿ ತುಂಬಿಹುದು ಕಣ್ಣೀರು!

 1. ksraghavendranavada ಹೇಳುತ್ತಾರೆ:

  ನಾನು ಬಹಳ ಇಷ್ಟ ಪಡುವ ಮುಖೇಶನ ಶೋಕ ಗೀತೆಯಿದು. ರಾಜ್ ಕಪೂರ್ ಶ್ರಧ್ಧಾ೦ಜಲಿ ಕ್ಯಾಸೆಟ್ ನಲ್ಲಿನ ಎಲ್ಲಾ ರತ್ನಗಳಲ್ಲಿ ಇದೂ ಒ೦ದು ರತ್ನ. ಮೊನ್ನೆಯವರೆಗೂ ಆ ಕ್ಯಾಸೆಟ್ ಅನ್ನು ಜತನವಾಗಿ ಇಟ್ಟುಕೊ೦ಡಿದ್ದೆ.ನನ್ನ ಚೆನ್ನೈ ಮಿತ್ರ ಬ೦ದಾಗ ಕೇಳಿಸಿದಾಗ, ಅದನ್ನು ಆತ ನನಗರಿವಿಲ್ಲದೇ ಎತ್ತಿಕೊ೦ಡು ಹೋಗಿ, ಆನ೦ತರ ದೂರವಾಣಿ ಯ ಮೂಲಕ ತಿಳಿಸಿದಾಗ ಬಹಳ ನೊ೦ದು ಕೊ೦ಡೆ. ಪುನ: ಅದನ್ನು ಕೊಳ್ಳಲೇ ಬೇಕು. ಮೊನ್ನೆ ಆ ಹಾಡನ್ನು ಬಹಳ ಕೇಳುಬ ಮನಸ್ಸಾಗಿ ಹುಡುಕಿದಾಗ ನಡೆದದ್ದಿಷ್ಟು!

  ಅ೦ತರ್ಜಾಲ ಹೊಕ್ಕದ ದಿನಗಳನ್ನು ಕಳೆದು ನ೦ತರ ಪುನ: ಅ೦ತರ್ಜಾಲಕ್ಕೆ ಬ೦ದಾಗ ಆ ನನ್ನ ರಜಾದಿನಗಳಲ್ಲಿ ಆಸುಮನ ಮಾತಾಡಿರುವುದನ್ನೆಲ್ಲಾ ಕೇಳುವುದು ನನ್ನ ರೂಢಿ! ಅ೦ತೆಯೇ ಈ ಅನುವಾದವನ್ನು ಓದಿ, ಮೂಲ ಹಾಡನ್ನು ಕೇಳುವ ಅಗತ್ಯವಿಲ್ಲವೆ೦ದೆನಿಸಿತು!
  ಮೂಲ ಹಾಡನ್ನು ಕೇಳಿದಷ್ಟೇ ನೆಮ್ಮದಿ ಭಾವಾನುವಾದದಿ೦ದ ಪಡೆದೆ!

  ನಮಸ್ಕಾರಗಳೊ೦ದಿಗೆ,
  ನಿಮ್ಮವ ನಾವಡ.

  ಇ೦ದು

  • ಆಸು ಹೆಗ್ಡೆ ಹೇಳುತ್ತಾರೆ:

   ಪ್ರತಿಯೊಂದು ಮಾತನ್ನೂ ಅತೀವ ಆಸಕ್ತಿಯಿಂದ ಓದಿ, ವಿಮರ್ಶಿಸಿ ಪ್ರತಿಕ್ರಿಯಿಸುವ ತಮಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು.
   ಭಾವಾನುವಾದ ಮಾಡುವಾಗ ಪಡುವ ತ್ರಾಸ ನನಗಷ್ಟೇ ಗೊತ್ತು.
   ಮೂಲ ಧಾಟಿಯನ್ನು ಉಳಿಸಿಕೊಂಡು, ಕಿಂಚಿತ್ತೂ ಗದ್ಯವಾಗದ ರೀತಿಯಲ್ಲಿ ನ್ಯಾಯ ಒದಗಿಸುವ ನಿಟ್ಟಿನಲ್ಲ ಬಳಸುವ ಪದಗಳು, ಓದುಗರಿಗೆ ಮೊದಲ ನೋಟಕ್ಕೆ ಅಥವಾ ಮೊದಲ ಓದಿಗೆ ಅಸ್ವೀಕೃತವೆನಿಸಲೂಬಹುದು ಎನ್ನುವ ಅರಿವು ನನಗಿದೆ. ಇಂತಹ ಗೆಯ್ಮೆಗಳನ್ನು ಪೂರ್ತಿ ಅರಥೈಸಿಕೊಳ್ಳಲು ಓದುಗರು ಮತ್ತೆ ಮತ್ತೆ ಓದಬೇಕಾದ ಆವಶ್ಯಕತೆ ಇರುವಂತೆಯೇ, ಇವುಗಳ ಮೇಲೆಯೇ ನನ್ನ ಮರುಗೆಯ್ಮೆಯ ಆವಶ್ಯಕತೆಯೂ ಇದೆಯೆಂದು ನನ್ನ ಭಾವನೆ.

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: